Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಮಲಿಂಗಾರೆಡ್ಡಿ ಜೊತೆಗಿನ ಸಿಎಂ ಸಂಧಾನ ಸಕ್ಸಸ್ 

Advertisement

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಜೊತೆಗಿನ ಸಂಧಾನ ಸಕ್ಸಸ್ ಆಗಿದೆ. ನಿನ್ನೆ ರಾತ್ರಿ ರಾಮಲಿಂಗಾರೆಡ್ಡಿ ಜೊತೆಗೆ ಸಿಎಂ ಡಿ.ಕೆ. ಶಿವಕುಮಾರ್ ಒನ್ ಟು ಒನ್ ಮೀಟಿಂಗ್ ಮಾಡಿದ್ದಾರೆ. 

ಜಯನಗರದ ಹೋಟೆಲ್ ವೊಂದರಲ್ಲಿ ರಾಮಲಿಂಗಾರೆಡ್ಡಿ ಜತೆ ಚರ್ಚೆ ನಡೆಸಿದ್ದಾರೆ.ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ರಾಮಲಿಂಗಾರೆಡ್ಡಿ ಅವರ ಮನವೊಲಿಸಿದ್ದಾರೆ.

ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಸಲಾಗಿದೆ.

 ಸಭೆ ಬಳಿಕ ತಮ್ಮ ನಿಲುವಿನ ಬಗ್ಗೆ ರಾಮಲಿಂಗಾರೆಡ್ಡಿ ಇನ್ನೂ ಸ್ಪಷ್ಟಪಡಿಸಿಲ್ಲ. ಇದು ಪಕ್ಷದ ವಿಚಾರ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದಷ್ಟೇ ಸಿಎಂ ಹೇಳಿದ್ದಾರೆ.

ನಾವೆಲ್ಲ ಕೂತು ಮಾತನಾಡಿದ್ದೇವೆ. ಪರಿಹಾರ ಆಗಿದೆ ಎಂದು ರಾಮಲಿಂಗಾರೆಡ್ಡಿ ಮನವೊಲಿಕೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದು ನಮ್ಮ ಫ್ಯಾಮಿಲಿ ಪ್ರಾಬ್ಲಮ್, ನಾನು, ರಾಮಲಿಂಗಾರೆಡ್ಡಿ, ಹೆಚ್.ಎಂ. ರೇವಣ್ಣ 1980ರಿಂದಲೂ ಸ್ನೇಹಿತರು. ನಾನು ಚೀಫ್ ಮಿನಿಸ್ಟರ್, ರಾಮಲಿಂಗಾರೆಡ್ಡಿ ಮಿನಿಸ್ಟರ್. ನಾವೆಲ್ಲರೂ ಸ್ನೇಹಿತರು. ನಾವು ಕಾಂಗ್ರೆಸ್ ನಲ್ಲಿ ಬೆಳೆದವರು.

 ಪಕ್ಷವನ್ನು ಬೆಳೆಸುತ್ತಿರುವವರು. ಬೆಂಗಳೂರು ಅಭಿವೃದ್ಧಿ ಆಗಬೇಕು ಎನ್ನುವವರು. ರಾಮಲಿಂಗಾರೆಡ್ಡಿ ಏನು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ಅವರ ನೋವು ಹೇಳಿಕೊಂಡಿದ್ದಾರೆ. ಮಿಸ್ ಕಮ್ಯುನಿಕೇಷನ್ ಆಗಿದೆ ಎಂದು ಹೇಳಿದ್ದಾರೆ.

ತಮಗೆ ಜಲ ಸಂಪನ್ಮೂಲ ಖಾತೆ ಬೇಡ ಎಂದಿದ್ದಾರೆ. ಎಲ್ಲವನ್ನು ಹೇಳಬೇಕಾದ ಅನಿವಾರ್ಯತೆ ಇಲ್ಲ. ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಫಸ್ಟ್ ಕ್ಲಾಸ್ ಆಗಿ ನಡೆಸುತ್ತಿದ್ದೇವೆ. ಹಿರಿಯ ನಾಯಕರಿಗೆ ಅವಕಾಶ ಕೊಟ್ಟಿದ್ದೇವೆ. ಎಲ್ಲಾ ಸರಿ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎಲ್ಲಾ ನಿವಾರಣೆಯಾಗಿದೆ. ಅವರು ಏನು ಹೇಳಿದರೋ ಅದನ್ನೇ ನಾನು ಹೇಳೋದು ಎಂದು ಡಿ.ಕೆ. ಶಿವಕುಮಾರ್ ಜತೆಗಿನ ಸಭೆ ಬಳಿಕ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟ ವಿಸ್ತರಣೆ ಫಿಕ್ಸ್ : ಇಂದು ದೆಹಲಿಗೆ ಡಿ. ಕೆ ಶಿವಕುಮಾರ್ರಾಜ್ಯದಲ್ಲಿ ಬರಗಾಲ : ಪ್ರತಿ ರೈತರಿಗೆ 50,000 ರೂ. ಪರಿಹಾರ ನೀಡಬೇಕು : ಯಡಿಯೂರಪ್ಪ ಆಗ್ರಹಅಡ್ರೆಸ್ ಕೇಳುವ ನೆಪದಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ಮೂವರು ದುಷ್ಟರು ಅರೆಸ್ಟ್ ಎರಡು ತಲೆ, ಎರಡು ಬಾಲವಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಗಿರ್ ತಳಿಯ ಹಸುಮಣ್ಣಲ್ಲಿ ಮಣ್ಣಾದ ಚೆನ್ನಮ್ಮ : ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಪ್ರಯಾಣಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತಕ್ಕೆ ಬಲಿಯಾದ ಶಿಕ್ಷಕತಾಯಿ ಚೆನ್ನಮ್ಮಗೆ ಮುತ್ತಿಟ್ಟು ಕಣ್ಣೀರಿಟ್ಟ ಕುಮಾರಸ್ವಾಮಿ ೨-೧ ರಿಂದ ಚುಟುಕು ಸರಣಿ ಗೆದ್ದ ಬಾಂಗ್ಲಾ50 ಬಾರಿ ಪ್ರಯತ್ನಿಸಿದರೂ ಸರ್ಕಾರಿ ನೌಕರಿ ಸಿಗಲಿಲ್ಲ : ಆತ್ಮಹತ್ಯೆ ಮಾಡಿಕೊಂಡ ಬಿಟೆಕ್ ಗೋಲ್ಡ್ ಮೆಡಲಿಸ್ಟ್ ಗೂಗಲ್ ಮ್ಯಾಪ್ ನೋಡಿ ಹಳ್ಳಕ್ಕೆ ಬಿದ್ದ ಕಾರು