ಚಿಂಚೋಳಿ: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಈದ್ಗಾ ಮೈದಾನದಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರವಾದ ಒಂಬತ್ತನೇ ತಿಂಗಳಾಗಿದ್ದು, ಇದು ಆತ್ಮಶುದ್ಧಿ, ಶಿಸ್ತು,ಕರುಣೆ ಮತ್ತು ದೈವಿಕ ಸಾಮಿಪ್ಯದ ಸಂಕೇತವಾಗಿದೆ.ತಿಂಗಳ ಪೂರ್ತಿ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ (ರೋಜಾ) ಆಚರಿಸಿ, ಪ್ರಾರ್ಥನೆ, ದಾನ-ಧರ್ಮಗಳ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾಗಲು ಮತ್ತು ಬಡವರ ಹಸಿವಿನ ಅರಿವು ಮೂಡಿಸಿಕೊಳ್ಳಲು ಈ ಮಾಸ ಮಹತ್ವದ್ದಾಗಿದೆ. ಪವಿತ್ರವಾದ ರಂಜಾನ್ ಹಬ್ಬದ ನಿಮಿತವಾಗಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು ಈ ಸಂದರ್ಭದಲ್ಲಿ ಮುಸ್ಲಿಂ ಕಮಿಟಿ ಅಧ್ಯಕ್ಷರಾದ ಮನ್ನನ್ ಪಾಷಾ ಮೊಮೀನ್ ಹಾಗೂ ಜಹೀರ್ ಪಟೇಲ್ ತಾಹೇರ್ ಪಟೇಲ್ ಮೇಯೀಜ ಪಟೇಲ್.ರಜಾಕ್ ಪಟೇಲ್.ನಾಶಿರ ಹುಸೇನ್.ಅಕ್ರಮ ಮೋಮಿನ್.ಮುನ್ನ ಪಟೇಲ್.ಸರ್ಮಾಥ ಮೋಮಿನ್.ಮಾಲ್ವೆಗಳಾದಂತ ಹುಸೇನ್ ಹಶ್ಮಿ ಸಮೀರ್ ನೋರಿ ಸೇರಿದಂತೆ ಸುಲೇಪೇಟ ಜಾಮಿಯ ಮಸೀದಿ ಕಮಿಟಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಸರ್ವ ಮುಸ್ಲಿಂ ಬಾಂಧವರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.