LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಭೂಮಾನಂದನ ಕೊಲೆ ಖಂಡಿಸಿ! ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ!

Advertisement

ಸಿಂಧನೂರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ದಲಿತ ಮುಖಂಡ ಭೂಮಾನಂದನ ಅಮಾನುಷ ಕೊಲೆಯ ಪೈಶಾಚಿಕ ಕೃತ್ಯವನ್ನು ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ನಗರದ ಗಾಂಧಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟಿಸಿ  ಮಾನ್ಯ ತಹಸಿಲ್ದಾರ್ ಸಿಂಧನೂರು ಅವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಂತರ ಅವರು ಮಾತನಾಡಿ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಆದರೆ ಈ ನೆಲದ ವಾಸ್ತವ ಏನು? ಇವತ್ತಿಗೂ ದಲಿತರು ಗೌರವದಿಂದ ಬದುಕಲು ಹೊರಟರೆ ಹಲ್ಲೆ, ಕೊಲೆ,ಅವಮಾನ, ಬೆದರಿಕೆ, ಸುಳ್ಳು ಕೇಸು, ಸಾಮಾಜಿಕ ಬಹಿಷ್ಕಾರ  ಇದೇ ಅವರ ಪಾಲಾಗುತ್ತಿದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಕ್ರಾಸ್ ನಲ್ಲಿ ಆಗಸ್ಟ್ 4ರಂದು ಹದ್ದಿನಾಳ ಗ್ರಾಮದ ದಲಿತ ಮುಖಂಡ ಭೂಮಾನಂದನ ಭೀಕರ ಕೊಲೆಯು,ರಾಜ್ಯದ ದಲಿತ ಸಮಾಜದ ಮನಸ್ಸಿಗೆ ಆಳವಾದ ಗಾಯ ಮಾಡಿದೆ ದಲಿತರ ಏಳಿಗೆಯನ್ನು ಸಹಿಸದ ಜಾತಿವಾದಿಗಳು,ಪಟ್ಟ ಭದ್ರ ಹಿತಾಸಕ್ತಿಗಳು, ಕುತಂತ್ರದಿಂದ ದಲಿತರ ಮೇಲೆ ದಾಳಿ ದೌರ್ಜನ್ಯ, ಕೊಲೆ ಮಾಡುವ ಮೂಲಕ, ಭಯಾನಕ ಕೃತ್ಯ ಎಸಗಿ 
ಮನುಷ್ಯರೆದೆಯಲ್ಲಿ ಭಯದ ತಲ್ಲಣಗಳನ್ನು ಸೃಷ್ಟಿಸಿ, ಶೋಷಿತರು ಆತಂಕದಲ್ಲಿ ಬದುಕುವಂಥ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.

ಆದ್ದರಿಂದ ಕರ್ನಾಟಕ ಸರ್ಕಾರವು ಭೂಮಾನಂದನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ  ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ   ರಾಜ್ಯದಾದ್ಯಂತ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು
 ಸಂದರ್ಭದಲ್ಲಿ: ಎಚ್ ಎನ್. ಬಡಿಗೇರ್. ಅಂಬ್ರುಸ್ ಕೊಡ್ಲಿ. ಮೌನೇಶ್ ಜಾಲವಾಡಗಿ. ಅಮರೇಶ್ ಗಿರಿಜಾಲಿ. ಅಲ್ಲಮಪ್ರಭು ಪೂಜಾರ್. ಶಿವರಾಜ್ ಉಪ್ಪಲದೊಡ್ಡಿ. ಹಸೇನಪ್ಪ ಸೋಲಂಗಿ. ಹನುಮಂತ ಹಂಪನಾಳ. ಮೌಲಪ್ಪ ಮಾಡಿಸಿರುವಾರ.

ಅಶೋಕ್ ಗೊರೆಬಾಳ. ಪಂಪಾಪತಿ ಹಂಚಿನಾಳ. ಪ್ರವೀಣ್ ದುಮತಿ. ಸುರೇಶ್  ಎಲೆಕೂಡ್ಲಿಗಿ. ಗುರುರಾಜ ಮುಕ್ಕುಂದ. ವೀರೇಶ್ ಹಂಚಿನಾಳ ಕೆ. ಹುಲುಗಪ್ಪ ಮಲ್ಕಾಪುರ. ನರಸಪ್ಪ ಕಟ್ಟಿಮನಿ.ರಮೇಶ್ ಬಸಾಪುರ ಸೇರಿದಂತೆ ಅನೇಕರು ಇದ್ದರು.


ವರದಿ : ಬಸವರಾಜ ಬುಕ್ಕನಹಟ್ಟಿ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್