ಸನ್ಮಾನ ಸ್ವೀಕರಿಸಿ ನೂತನ ಉಪಾಧ್ಯಕ್ಷ ಮಂಜುನಾಥ್ ಟ್ರಾವೆಲ್ಸ್ ಮಾತನಾಡಿದವರು ದೊಡ್ಡಬಿದರಕಲ್ಲ್ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಗೆ
ನಿಷ್ಠೆ ಪ್ರಾಮಾಣಿಕ ಶ್ರದ್ದೆಯಿಂದ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಅದನ್ನೆಲ್ಲ ಗಮನಿಸಿದ ನಮ್ಮ ಶಾಸಕ ಎಸ್ ಟಿ ಸೋಮಶೇಖರ್ ಅವರು ನನ್ನನ್ನು ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದಲಿತ ಮುಖಂಡ ಹಾಗೂ ಕಾಂಗ್ರೆಸ್ ಮುಖಂಡ ಕೇಶವ ಮೂರ್ತಿ ಮಾತನಾಡಿ ದೊಡ್ಡ ಬಿದರಿಕಲ್ಲು ವಾರ್ಡಿಗೆ ಆನೆ ಬಲ ಬಂದಂತಾಗಿದೆ ಏಕೆಂದರೆ ಮಂಜುನಾಥ್ ಟ್ರಾವೆಲ್ಸ್ ಅಣ್ಣ ನವರು ಹಲವಾರು ವರ್ಷಗಳಿಂದ ಸಮಾಜ ಮುಖಿಯಾಗಿ ಬಡವರ, ಕೂಲಿ ಕಾರ್ಮಿಕರ, ದೀನದಲಿತರ ಮತ್ತು ವಿದ್ಯಾರ್ಥಿಗಳ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ ನಮ್ಮ ಧೀಮಂತ ನಾಯಕ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅಣ್ಣನವರು ಆಯ್ಕೆ ಮಾಡಿದಕ್ಕೆ ಅವರಿಗೆ ಮತ್ತು ಮಂಜುನಾಥ್ ಅವರಿಗೆ ಕಾರ್ಯಕರ್ತರಿ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿ ಕೇಶವಮೂರ್ತಿ ಮಾತನಾಡಿದರು.
ಈ ಸಂದರ್ಭದಲ್ಲಿ ದೊಡ್ಡ ಬಿದರಿಕಲ್ಲು ವಾರ್ಡಿನ ಕಾಂಗ್ರೆಸ್ ಮುಖಂಡ ಕೇಶವ ಮೂರ್ತಿ, ಸುರೇಶ್ ಗೌಡ್ರು, ಮಹಾಲಕ್ಷ್ಮೀ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಮಂಜುನಾಥ್ ಅವರಿಗೆ ಅಭಿನಂದಿಸಿದರು.
ವರದಿ :ಅಯ್ಯಣ್ಣ ಮಾಸ್ಟರ್

