
ಸಮಯಕ್ಕೆ ಸರಿಯಾಗಿ ಪೋಷಕರು ಜೊತೆ ಮಕ್ಕಳನ್ನು ಕಳಿಸಬೇಕಾಗಿದ್ದ ಶಾಲೆಯ ಮುಖ್ಯಸ್ಥರು ಅಪರಿಚಿತ ವಾಗಿರುವಂತ ಶಿವನಗೌಡ ಎಂಬುವನ ಜೊತೆ ಬಾಲಕಿಯನ್ನು ಕಳಿಸಿದ್ದರಿಂದ ಈ ಕೃತ್ಯ ನಡೆದಿದೆ ಇಂಥ ನೀಚ ಕಾಮುಕರಿಗೆ ಸರ್ಕಾರ ಕಠಿಣ ಶಿಕ್ಷೆಯನ್ನು ನೀಡಿ ಮುಂದೆಂದು ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು ಹಾಗೂ ಬಾಲಕಿ ಓದುತ್ತಿದ್ದ ವಿದ್ಯಾಭಾರತಿ ಶಾಲೆ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ವಿ ತಸಿಲ್ದಾರ್ ಮುಖಾಂತರ ಸನ್ಮಾನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ- ದಲಿತ ವಿಧ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ್ ಜಾಲವಾಡಗಿ, ತಾಲೂಕು ಸಂಚಾಲಕ ಬಂಡೆ ಗುರು, ದುರ್ಗೇಶ್ ಕಲ್ಮಂಗಿ, ಹುಚ್ಚಪ್ಪ ಉಟಕನೂರು, ಹೊಳೆಯಪ್ಪ ಉಟಕನೂರು, ವಿಜಯರಾಣಿ ಸಿರವಾರ, ಚನ್ನಬಸವ ಯಾಪಲಪರ್ವಿ, ಓಂ ಶ್ರೀ ಮಾನ್ವಿ, ಬಾಲರಾಜ್ ಸಿರವಾರ, ಇನ್ನು ಅನೇಕರಿದ್ದರು.
ಬಸವರಾಜ ಬುಕ್ಕನಹಟ್ಟಿ.

