Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಗಲಕೋಟೆಯಲ್ಲಿ ಸರ್ಕಾರಿ ನೌಕರನಿಗೆ ಡಿಜಿಟಲ್ ಅರೆಸ್ಟ್ : 83.82 ಲಕ್ಷ ರೂ. ದೂಚಿದ ಖದೀಮರು 

Advertisement

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸೈಬರ್ ಅಪರಾಧಿಗಳು ಹೊಸ ಹೊಸ ರೂಪದಲ್ಲಿ ಜನರನ್ನು ವಂಚಿಸುತ್ತಿದ್ದು, ಇದೀಗ ಜಿಲ್ಲೆಯ ಸರ್ಕಾರಿ ನೌಕರರೊಬ್ಬರು ಇಂತಹದ್ದೇ ಒಂದು 'ಡಿಜಿಟಲ್ ಅರೆಸ್ಟ್' (Digital Arrest) ಜಾಲಕ್ಕೆ ಸಿಲುಕಿ ಬರೋಬ್ಬರಿ 83.82 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆಯ ಯುಕೆಪಿ (UKP) ಪುನರ್ವಸತಿ ಕಚೇರಿಯಲ್ಲಿ ಹಿರಿಯ ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಎಚ್.ವಿ. ಸುರೇಶ್ ರಾವ್ (59) ಎಂಬುವವರೇ ಈ ಸೈಬರ್ ವಂಚನೆಗೆ ಬಲಿಯಾದ ದುರ್ದೈವಿ.

'ಟ್ರಾಯ್' ಹೆಸರಿನಲ್ಲಿ ಬಂದ ಮೊದಲ ಕರೆ: ಖದೀಮರ ಗ್ಯಾಂಗ್ ಮೊದಲಿಗೆ ಸುರೇಶ್ ರಾವ್ ಅವರಿಗೆ ಕರೆ ಮಾಡಿ, ತಾವು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದಿಂದ ಮಾತನಾಡುತ್ತಿರುವುದಾಗಿ ನಂಬಿಸಿದೆ.

"ನಿಮ್ಮ ಆಧಾರ್ ಕಾರ್ಡ್ ಬಳಸಿ ಖರೀದಿಸಲಾದ ಸಿಮ್ ಕಾರ್ಡ್ ಒಂದರಿಂದ ಕಾನೂನುಬಾಹಿರ ಸಂದೇಶಗಳನ್ನು ಕಳುಹಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ನಿಮ್ಮ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ" ಎಂದು ಹೆದರಿಸಿದ್ದಾರೆ. ಅಲ್ಲಿಂದ ಆರಂಭವಾದ ಇವರ ಬೆದರಿಕೆ ನಾಟಕ ಸುರೇಶ್ ರಾವ್ ಅವರ ಇಡೀ ಕುಟುಂಬವನ್ನು ಆತಂಕಕ್ಕೆ ತಳ್ಳಿದೆ.

ಖದೀಮರ ಹೈಟೆಕ್ ನಾಟಕ ಮತ್ತು ವೇಷಧಾರbase: ಬಲಿಪಶುವನ್ನು ಪೂರ್ಣವಾಗಿ ನಂಬಿಸಲು ವಂಚಕರು ವಿಡಿಯೋ ಕರೆಗಳನ್ನು ಮಾಡಿದ್ದಾರೆ.

ಅತ್ಯಂತ ವ್ಯವಸ್ಥಿತವಾಗಿ ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಬ್ಯಾಂಕ್‌ಗಳ ಸೆಟಪ್ ಇರುವಂತಹ ಬ್ಯಾಕ್‌ಗ್ರೌಂಡ್ ಬಳಸಿ ವಿಡಿಯೋ ಕಾಲ್ ಮಾಡಲಾಗಿತ್ತು.

ಅಷ್ಟೇ ಅಲ್ಲದೆ, ವಂಚಕರು ಪೊಲೀಸರು, ವಕೀಲರು ಹಾಗೂ ನ್ಯಾಯಾಧೀಶರ (Judge) ವೇಷ ಧರಿಸಿ ಸುರೇಶ್ ರಾವ್ ಹಾಗೂ ಅವರ ಕುಟುಂಬ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸುವ ನಾಟಕವಾಡಿ, ಅವರನ್ನು ಮಾನಸಿಕವಾಗಿ ಕಂಗೆಡುವಂತೆ ಮಾಡಿದ್ದಾರೆ.

ಮನಿ ಲಾಂಡರಿಂಗ್ ಲಿಂಕ್ ಮತ್ತು ಹೆದರಿಕೆ: ವಿಚಾರಣೆಯ ನಾಟಕವಾಡುತ್ತಾ ವಂಚಕರು, "ನೀವು ಪ್ರಮುಖ ಉದ್ಯಮಿ ನರೇಶ್ ಗೋಯಲ್ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಖಾತೆಯಿಂದ ಮುಂಬೈನ ಕೆನರಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ.

ಈ ಪ್ರಕರಣದಿಂದ ನಿಮ್ಮ ಹೆಸರು ಕೈಬಿಡಬೇಕಾದರೆ ಮತ್ತು ನಿಮ್ಮನ್ನು ಬಂಧಿಸದೇ ಇರಬೇಕಾದರೆ ನಾವು ಹೇಳಿದಷ್ಟು ಹಣವನ್ನು ಠೇವಣಿ ಇಡಬೇಕು" ಎಂದು ಖಡಕ್ ಆಗಿ ಬೆದರಿಕೆ ಹಾಕಿದ್ದಾರೆ. ಮಾನಹಾನಿ ಮತ್ತು ಜೈಲು ಶಿಕ್ಷೆಯ ಭಯದಿಂದ ಸುರೇಶ್ ರಾವ್ ಅವರು ವಂಚಕರು ಹೇಳಿದ ದಾರಿಗೆ ಬಂದಿದ್ದಾರೆ.

ಹಂತ ಹಂತವಾಗಿ ₹83.82 ಲಕ್ಷ ವರ್ಗಾವಣೆ: ಪ್ರಕರಣದಿಂದ ಪಾರಾಗಲು ವಂಚಕರು ಮೊದಲು 45 ಲಕ್ಷದ 22 ಸಾವಿರ ರೂಪಾಯಿ ನೀಡುವಂತೆ ಸೂಚಿಸಿದ್ದರು. 

 ಅದರಂತೆ ಸುರೇಶ್ ರಾವ್ ಅವರು ಮಾರ್ಚ್ 18 ರಿಂದ ಏಪ್ರಿಲ್ 15 ರ ಅವಧಿಯಲ್ಲಿ ಹಂತ ಹಂತವಾಗಿ ಐಡಿಎಫ್‌ಸಿ (IDFC) ಮತ್ತು ಐಸಿಐಸಿಐ (ICICI) ಬ್ಯಾಂಕ್ ಖಾತೆಗಳ ಮೂಲಕ ವಂಚಕರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು 83.82 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತ ನೌಕರರು ಸೈಬರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್ ಬಿ ತಿಮ್ಮಾಪುರ ಅವರಿಗೆ ಮಂತ್ರಿ ಸ್ಥಾನ ನೀಡಬೇಕು : ಕೆಪಿಸಿಸಿ ಮಾಧ್ಯಮ ವಕ್ತಾರ ರಾವಸಾಬ ಐಹೊಳೆವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೆಸ್ ನ ಮೂವರು, ಬಿಜೆಪಿ ಓರ್ವ ಅವಿರೋಧ ಆಯ್ಕೆ ಬಾಗಲಕೋಟೆಯಲ್ಲಿ ಸರ್ಕಾರಿ ನೌಕರನಿಗೆ ಡಿಜಿಟಲ್ ಅರೆಸ್ಟ್ : 83.82 ಲಕ್ಷ ರೂ. ದೂಚಿದ ಖದೀಮರು ಪತಿಯೊಂದಿಗೆ ಜಗಳವಾಡಿ ತವರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ : 10 ಜನ ಅರೆಸ್ಟ್  ಉತ್ತಮ ಸಮಾಜಕ್ಕೆ ಆರೋಗ್ಯವಂತ ಜನರೇ ಆಸ್ತಿ: ಶ್ರೀ ವಿಜಯಕುಮಾರ್ಬೆಂಗಳೂರಿನಲ್ಲಿ 50 ಡಿಟೋನೇಟರ್, 225 ಜಿಲೇಟಿನ್ ಕಡ್ಡಿಗಳು ವಶಕ್ಕೆಶಿವಾನಂದ ನೀಲಣ್ಣವರ್ ವಂಚನೆ ಕೇಸ್ : ಚಿತ್ರರಂಗದ ನಟ, ನಟಿಯರಿಗೆ ಶಾಕ್  ಜಗಳ ನೋಡಲು ಹೋದ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆಕ್ಸ್‌ಫರ್ಡ್ ಶಾಲೆಯ ಮಾಲಿಕರು.ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಕೃಷಿ ಅಧಿಕಾರಿಗಳಿಂದ ರೈತರಿಗೆ ರಸಗೊಬ್ಬರ ಬೀಜ ಕ್ರಿಮಿನಾಶಕ ಅನುಕೂಲತೆ ಬಗ್ಗೆ ಮಹತ್ವದ ಸಭೆ :  ಬಸನಗೌಡ ದದ್ದಲ್