Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆ

Advertisement

ಪಾವಗಡ ಫಟ್ಡಣದಲ್ಲಿ ಬಳ್ಳಾರಿ ರಾಜ್ಯ ಹೆದ್ದಾರಿ ರಸ್ತೆಯ ಚಳ್ಳಕೆರೆ ಕ್ರಾಸ್ ಬಳಿ ಇರುವ  ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆ. 

 ಅಧಿಕಾರಿಗಳ ಅಸಡ್ಡೆಗೆ 'ಕುರಿ ದೊಡ್ಡಿ'ಯಾದ ಅಂಬೇಡ್ಕರ್ ವಸತಿ ಶಾಲೆ..


​ಪಾವಗಡ : ಪಟ್ಟಣದಲ್ಲಿರವ ಬಳ್ಳಾರಿ ರಾಜ್ಯ ಹೆದ್ದಾರಿಯ ಚಳ್ಳಕೆರೆ ಕ್ರಾಸ್ ಬಳಿ ಇರುವ, ತಾಲ್ಲೂಕಿನ ಏಕೈಕ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸಂಪೂರ್ಣವಾಗಿ ರೋಗಗ್ರಸ್ತವಾಗಿದೆ. 

1ರಿಂದ 5ನೇ ತರಗತಿಯ 125 ಮುಗ್ಧ ಮಕ್ಕಳಲ್ಲಿ ಶೇ. 90ರಷ್ಟು ಭಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಹಾಗೂ ಅನಾಥ ಮಕ್ಕಳೇ ಇದ್ದು, ವ್ಯವಸ್ಥೆಯ ಕ್ರೂರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದ್ದಾರೆ.

​ಅಸಹ್ಯ ಹುಟ್ಟಿಸುವ ವಾತಾವರಣ, ಜೀವ ಭಯದಲ್ಲಿ ಮಕ್ಕಳು:

​ಶೌಚಾಲಯ-ಸ್ನಾನದ ಗೃಹದ ನರಕ..ಹೆಣ್ಣು ಮತ್ತು ಗಂಡು ಮಕ್ಕಳಿಗೆ ಒಂದೇ ಕಡೆ ಶೌಚಾಲಯ ಹಾಗೂ ಸ್ನಾನದ ಗೃಹವಿದೆ! 

ಸೂಕ್ತ ಶೌಚಾಲಯವಿಲ್ಲದೆ ಬಾಲಕಿಯರು ಬಯಲು ಶೌಚಕ್ಕೆ ಸುತ್ತಮುತ್ತಲಿನ ಗಿಡಗಂಟಿಗಳ ಆಸರೆ ಪಡೆಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಮುಖ್ಯ ಶಿಕ್ಷಕರು ಮಕ್ಕಳುನ್ನು ಬಯಲು ಶೌಚಾಲಯಕ್ಕೆ ಕಳಿಸುತ್ತಾರೆ.

 ಸುತ್ತಮುತ್ತಲಿನ ಗಿಡಗಂಟಿಗಳ ಹಾವುಗಳು ಸಂಭವಿಸಿದರೆ ಕೋಣೆ ಯಾರು.

​ನೆಲದ ಮೇಲೆಯೇ ಜೀವನ:

 ಡೈನಿಂಗ್ ಹಾಲ್ ಇಲ್ಲದೆ ಮಕ್ಕಳು ಮಣ್ಣಿನ ಮೇಲೆಯೇ ಕುಳಿತು ಊಟ ಮಾಡುತ್ತಿದ್ದಾರೆ. 

ಸೂಕ್ತ ಬೆಳಕಿಲ್ಲದ ಕೊಠಡಿಗಳಲ್ಲಿ, ಮಣ್ಣಿನ ಮೇಲೆಯೇ ಕೂತು ಹೋಮ್‌ವರ್ಕ್ ಮಾಡುವ ದೃಶ್ಯಗಳು ಎಂಥವರ ಕಣ್ಣಲ್ಲೂ ನೀರು ತರಿಸುತ್ತವೆ.

​ಯಾವ ಕ್ಷಣದಲ್ಲಾದರೂ ಬೀಳಬಹುದು ಮೇಲ್ಚಾವಣಿ...ಕಟ್ಟಡವು ಸಂಪೂರ್ಣ ದುರಸ್ತಿಯಲ್ಲಿದ್ದು, ಬಿರುಗಾಳಿ ಬಂದರೆ ಮೇಲ್ಚಾವಣಿ ಕುಸಿದು ಬೀಳುವ ಭೀತಿಯಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ.

​ಅಧಿಕಾರಿಗಳ ಡೋಂಗಿ ಪ್ರದರ್ಶನ ಮತ್ತು ಯಕ್ಷಪ್ರಶ್ನೆ:

ಬಾಲಕಾರ್ಮಿಕ ದಿನಾಚರಣೆಯಲ್ಲಿ ವಿರುದ್ದ ಭಾಷಣ ಬಿಗಿಯುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕಚೇರಿಗಳಿಗೆ ಲಕ್ಷಾಂತರ ರೂಪಾಯಿ ಸುರಿದು.(ಪಿಓಪಿ.)ಹಾಗೂ ಕ್ರೀಡಾಂಗಣಗಳನ್ನು ನಿರ್ಮಿಸಿಕೊಳ್ಳುತ್ತಾರೆ.

 ಆದರೆ ಈ ಮುಗ್ಧ ಮಕ್ಕಳ ಮೂಲಸೌಕರ್ಯಕ್ಕೆ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ..

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಉತ್ತರಿಸಬೇಕಿದೆ.

​ಪತ್ರಿಕೆಯ ಸಾರ್ವಜನಿಕ ಹಕ್ಕೊತ್ತಾಯ ಹಾಗೂ ಖಡಕ್ ಆಗ್ರಹ...

​ಉನ್ನತಾಧಿಕಾರಿಗಳು ಹಾಸ್ಟೆಲ್‌ನಲ್ಲೇ ರಾತ್ರಿ ವಾಸ್ತವ್ಯ ಹೂಡಲಿ: ತಾಲ್ಲೂಕು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಕ್ಷಣವೇ ಈ ಹಾಸ್ಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಇಲ್ಲಿನ ಭೀಕರ ನರಕಯಾತನೆಯನ್ನು ಕಣ್ಣಾರೆ ನೋಡಬೇಕು.

​ತಕ್ಷಣ ಮೊಬೈಲ್ ಶೌಚಾಲಯ ನೀಡಿ...

 ತಕ್ಷಣವೇ ಶಾಲೆಗೆ ಮೊಬೈಲ್ ಶೌಚಾಲಯ ಹಾಗೂ ತಾತ್ಕಾಲಿಕ ಸ್ನಾನದ ಗೃಹಗಳನ್ನು ಒದಗಿಸಬೇಕು.

​ಆಯೋಗಗಳ ನೇರ ಭೇಟಿ: ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಖುದ್ದಾಗಿ ವಸತಿ ಶಾಲೆಗೆ ಭೇಟಿ ನೀಡಿ,

 ಈ ದಯನೀಯ ಸ್ಥಿತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು.

​ಅಂತಿಮ ಎಚ್ಚರಿಕೆ... ಒಂದು ವೇಳೆ ಕಟ್ಟಡ ಕುಸಿದು ಮಕ್ಕಳಿಗೆ ಏನಾದರೂ ದುರಂತ ಸಂಭವಿಸಿದರೆ, ಅದಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತವೇ ನೇರ ಹೊಣೆಯಾಗುತ್ತದೆ.

 ತಕ್ಷಣವೇ ಶಾಶ್ವತ ಪರಿಹಾರ ಒದಗಿಸದಿದ್ದರೆ, ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಮತ್ತು ಪೋಷಕರು ಅಧಿಕಾರಗಳ ವಿರುದ್ಧ  ಆಕ್ರೋಶದ ಬಿರುಗಾಳಿ ಏಳುವುದು ಖಚಿತ!

ವರದಿ : ಶಿವಾನಂದ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಾಯಿತಿ  ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಕಳುವಾದ ಬೈಕ್‌ಗಳ ಪತ್ತೆ – ಇಬ್ಬರು ಆರೋಪಿಗಳ ಬಂಧನಮಾಯಸಂದ್ರ ಕಸಾಪದಿಂದ ಎಸ್.ಜಾನಕಿಗೆ ಗಾನಾಂಜಲಿ ಅರ್ಪಣೆಗುರು ಪೂರ್ಣಿಮೆಯಿಂದ 4ನೇ ದಿನವೂ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನಕ್ಕೆ ಭಕ್ತರ ದಂಡುಮಹಾದೇವಪ್ಪ ತಾತನ ಭಕ್ತಿ ಸುಧೆ ಹಾಡುಗಳಲೋಕಾರ್ಪಣೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿಸಿದ ಎ.ಎಸ್.ಐ ಶಿವಲಿಂಗಪ್ಪಗೆ ಅಭ್ಯರ್ಥಿಗಳ ಕೃತಜ್ಞತೆಒಎಂಆರ್–ಪ್ರಶ್ನೆ ಪತ್ರಿಕೆ ವಿವಾದ; ಅಭ್ಯರ್ಥಿಗಳ ಆಕ್ರೋಶಕ್ಕೆ ಡಿಸಿ ಸ್ಪಷ್ಟನೆಸಚಿವ ಸಂಪುಟ ಪಟ್ಟಿಗೆ ಡಿ. ಕೆ ಶಿವಕುಮಾರ್ ವೇಟಿಂಗ್ : ಅತ್ತ ಖರ್ಗೆ, ರಾಗಾ ಮಿಟಿಂಗ್ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಮಾಡಿದ ಕೈ ಹೈಕಮಾಂಡ್