LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಲು ರೂಢಿ ಪಾಠಗಳು ಸಹಕಾರಿ : ಮಹಾಂತೇಶ ಓಲೇಕಾರ 

Advertisement

ಮಾನ್ವಿ : ಪ್ರಶಿಕ್ಷಣಾರ್ಥಿಗಳು ಬಿ.ಎಡ್. ತರಬೇತಿಯಲ್ಲಿ ರೂಢಿಪಾಠ ಎಂಬುದು ಕೇವಲ ಒಂದು ಪರೀಕ್ಷೆ ಅಥವಾ ಅಂಕ ಗಳಿಸುವ ಪ್ರಕ್ರಿಯೆಯಲ್ಲ. ಅದು ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಸಮಾಜಕ್ಕೆ ಬೆಳಕಾಗಬಲ್ಲ ಶಿಕ್ಷಕನನ್ನಾಗಿ ಪರಿವರ್ತಿಸುವ ಪವಿತ್ರವಾದ ಕಾರಖಾನೆ. ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಲು ರೂಡಿ ಪಾಠಗಳು ಸಹಕಾರಿಯಾಗಿವೆ ಎಂದು ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಓಲೇಕಾರ ಹೇಳಿದರು. ಪಟ್ಟಣದ ಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಶಾರದಾ ವಿದ್ಯಾನಿಕೇತನ ಬಿ ಇಡಿ ಕಾಲೇಜು ಮಾನ್ವಿ, ಪ್ರಶಿಕ್ಷಣಾರ್ಥಿಗಳಿಂದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತರಗತಿ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ಬೋರ್ಡ್  ಸೀಮೆಸುಣ್ಣ ಹಿಡಿದು ನಿಂತಾಗ ಅನುಭವಕ್ಕೆ ಬರುವ ಜವಾಬ್ದಾರಿ ಇದೆಯಲ್ಲ ಅದು ಯಾವುದೇ ಸಿದ್ಧಾಂತದ ಪುಸ್ತಕಗಳಲ್ಲೂ ಸಿಗುವುದಿಲ್ಲ.
ಇಂದು ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾಗಿದೆ. ತಂತ್ರಜ್ಞಾನ ಬೆಳೆದಿದೆ ಕಲಿಕಾ ವಿಧಾನಗಳು ನವೀನಗೊಂಡಿವೆ ಆದರೆ ಆತ್ಮೀಯತೆ ತಾಳ್ಮೆ ಮತ್ತು ಕಳಕಳಿಗೆ ಯಾವುದೇ ತಂತ್ರಜ್ಞಾನವೂ ಪರ್ಯಾಯವಾಗಲಾರದುಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಂತರ ಶಂಕರಪ್ಪ ನಕ್ಕುಂದಿ ಮಾತನಾಡಿ ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ಮಾಡುವ ಪಾಠ ಮಕ್ಕಳ ತಲೆಗೆ ತಲುಪಿದರೆ ಸಾಲದು, ಅವರ ಮನಸ್ಸಿಗೆ ತಲುಪಬೇಕು.
ಈ ರೂಢಿಪಾಠದ ಅವಧಿಯಲ್ಲಿ ನೀವು
 ಮಕ್ಕಳ ವಿವಿಧ ಮನಸ್ಥಿತಿಗಳನ್ನು ಅರ್ಥೈಸಿಕೊಳ್ಳುವುದನ್ನು ಕಲಿತಿದ್ದೀರಿ.ವಿಷಯವನ್ನು ಎಷ್ಟು ಸರಳವಾಗಿ ಹಾಗೂ ಆಕರ್ಷಕವಾಗಿ ಮಂಡಿಸಬೇಕು ಎಂಬುದನ್ನು ಅಭ್ಯಾಸ ಮಾಡಿದ್ದೀರಿ.ಒಬ್ಬ ಒಳ್ಳೆಯ ಶಿಕ್ಷಕ ಸದಾ ಕಲಿಯುವ ವಿದ್ಯಾರ್ಥಿಯಾಗಿರಬೇಕು ಎಂಬ ಸತ್ಯವನ್ನು ಅರಿತಿದ್ದೀರಿ. ಶಿಕ್ಷಕ ವೃತ್ತಿ ಎನ್ನುವುದು ಕೇವಲ ಜೀವನೋಪಾಯಕ್ಕೆ ಮಾಡುವ ಕೆಲಸವಲ್ಲ. ಪ್ರತಿಯೊಬ್ಬ ಮಗುವಿನ ಭವಿಷ್ಯವನ್ನು ದೇಶದ ನಾಯಕತ್ವವನ್ನು ರೂಪಿಸುವ ಪವಿತ್ರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು. ಉಪನ್ಯಾಸಕರಾದ ಆಂಜನೇಯ ನಸಲಾಪುರ ಮಾತನಾಡಿ 
ಪ್ರಶಿಕಣಾರ್ಥಿಗಳು ವಿದ್ಯಾರ್ಥಿಗಳಿಗೆ ಕಲಿಸಲಿಕ್ಕೆ ಮತ್ತು ತಾವು ಕಲಿಯುದಕ್ಕೆ ಸಹಕರಿಯಾಗುತ್ತದೆ. ಕಾಲೇಜಿನ ಹಂತದಲ್ಲಿ ಅಣುಬೋಧನೆ ಹಾಗೂ ಕಾಲೇಜು ಆಧಾರಿತ ಪಾಠಬೋಧನೆಗಳು ರೂಡಿ ಪಾಠಗಳಿಗೆ ಸಹಕಾರಿ ಯಾಗುತ್ತವೆ.ತರಗತಿಯಲ್ಲಿ ಆಡುವ ಪ್ರತಿಯೊಂದು ಮಾತು, ತೋರಿಸುವ ಪ್ರೀತಿ ಮಗುವಿನ ಇಡೀ ಜೀವನದ ಮೇಲೆಯೇ ಪ್ರಭಾವ ಬೀರಬಹುದು.
ನಿಮಗೆ ಪ್ರಾಯೋಗಿಕವಾಗಿ ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕರಿಗೂ ಹಾಗೂ ನಿಮ್ಮನ್ನು ಈ ಹಂತಕ್ಕೆ ತಂದಿಟ್ಟ ಕಾಲೇಜಿನ ಗುರುಗಳಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದು ಪ್ರಶಿಕ್ಷಣಾರ್ಥಿಗಳ ಕರ್ತವ್ಯ ಎಂದು ಹೇಳಿದರು. ಕಾರ್ಯಕ್ರದ ಅಧ್ಯಕ್ಷತೆಯನ್ನು ಚಂದ್ರಶೇಖರ ಪಾಟೀಲ್ ವಹಿಸಿ ಮಾತನಾಡಿ 
ಪ್ರಶಿಕ್ಷಣಾರ್ಥಿಗಳ ಮುಂದಿನ ಶಿಕ್ಷಕ ವೃತ್ತಿಜೀವನ ಯಶಸ್ವಿಯಾಗಲಿ. ನೀವು ನೂರಾರು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನದ ದೀವಿಗೆಯನ್ನು ಬೆಳಗಿಸುವಂತಾಗಲಿ. ಬಿ. ಇಡಿ ಯನ್ನು ಮಾಡಿ ಮುಗಿಸಿದ ಮೇಲೆ ಈ ವೃತ್ತಿಯ ಮೇಲೆ ಅವಲಂಬನೆಯಾಗದೆ ವಿವಿಧ ಹುದ್ದೆಗಳಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿ ಎಂದು ಹೇಳಿದರು. ಪ್ರಶಿಕ್ಷಣಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಹೊನ್ನಪ್ಪ ಕಟ್ಟಿಮನಿ ಹಿರಿಯ ಪತ್ರ ಕರ್ತರು, ಶಿಕ್ಷಕಿಯರಾದ ಸುಮಂಗಳ, ರೂಬಿಯಾ, ಅಮರಮ್ಮ ಹಾಗೂ ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾರ್ಥನೆ ಗೀತೆಯನ್ನು ಲಲಿತಾ ಸಂಗಡಿಗರು ಹಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಿಕ್ಷಣಾರ್ಥಿಯಾದ ರಾಜೇಶ್ವರಿ ನೆರವೇರಿಸಿದರು. ಮಹಾಂತೇಶ ಸ್ವಾಗತಿಸಿದರು, ಪವನಕುಮಾರ ವಂದಿಸಿದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸ್ಪೋಟಕ ತಿರುವು: ಸಿಸಿಟಿವಿಯಲ್ಲಿ ಅಪರಿಚಿತ ಓಡಾಟ ಸೆರೆಕ್ರೇನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ಬಾಂಗ್ಲಾದೇಶ ತಂಡಕ್ಕೆ 196 ರನ್ ಗೆಲುವಿನ ಗುರಿ ನೀಡಿದ ಭಾರತ ಬಾಗಲಕೋಟೆ ನಡುರಸ್ತೆಯಲ್ಲೇ ಯುವಕನಿಂದ ಅಸಭ್ಯ ವರ್ತನೆ: ಯುವತಿ ರಕ್ಷಣೆಗೆ ಬಂದವರನ್ನೇ ಜೈಲಿಗಟ್ಟಿದ ಪೊಲೀಸ್ರುಸಂಪೂರ್ಣ ಸರಣಿ ಜಯಕ್ಕೆ ಆಸ್ಟ್ರೇಲಿಯಾ ಯತ್ನಗಳತಗಾ ಗ್ರಾಮದಲ್ಲಿ ಪ್ರಜಾಸೇವೆ ಕಾರ್ಯಕ್ರಮಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಲು ರೂಢಿ ಪಾಠಗಳು ಸಹಕಾರಿ : ಮಹಾಂತೇಶ ಓಲೇಕಾರ ಯರಗಟ್ಟಿಯಲ್ಲಿ ಪ್ರಜಾ ಸೇವೆ ಆಂದೋಲನ ಸಭೆಕನ್ನಡಪರ ಹೋರಾಟಗಾರರ ವಿರುದ್ಧ ಕೇಸ್ ಗಳು ವಾಪಸ್‌: ಡಿ.ಕೆ.ಶಿವಕುಮಾರ್ಹುಬ್ಬಳ್ಳಿಯಲ್ಲಿ ಘೋರ ದುರಂತ : ಸಿಲಿಂಡರ್ ಸ್ಫೋಟಗೊಂಡು ಇಬ್ಬರು ದುರ್ಮರಣ