Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನ ಪರಿವರ್ತನೆಯಲ್ಲಿ ಬದಲಾದ ಬದುಕು:  ಅಫೀಮು ತ್ಯಜಿಸಿ ಜೇನುಕೃಷಿಗೆ ಒತ್ತು

Advertisement
ಪಲಾಮು(ಜಾರ್ಖಂಡ್​​​): ಒಂದು ಕಾಲದಲ್ಲಿ ಅಫೀಮಿಗೆ ಕುಖ್ಯಾತವಾಗಿದ್ದ ಜಿಲ್ಲೆಯೊಂದು ಈಗ ಜೇನುಕೃಷಿಯಿಂದ ಉತ್ತಮ ಬದಲಾವಣೆಗೆ ಸಾಕ್ಷಿಯಾಗಿದೆ.

ಜಾರ್ಖಂಡ್ ರಾಜ್ಯದ ಪಲಾಮು ಜಿಲ್ಲೆಯ ಮನಾಟು ಪ್ರದೇಶದಲ್ಲಿನ ಬುಡಕಟ್ಟು ಕುಟುಂಬಗಳು ದೊಡ್ಡ ಪ್ರಮಾಣದಲ್ಲಿ ಜೇನು ಉತ್ಪಾದನೆ ಆರಂಭಿಸಿವೆ. ಭಿತದಿಹಾದಲ್ಲಿ ಸುಮಾರು 28 ಬುಡಕಟ್ಟು ಕುಟುಂಬಗಳು ಮತ್ತು ದಲ್ದಾಲಿಯಾ ಪ್ರದೇಶದಲ್ಲಿ 26 ಬುಡಕಟ್ಟು ಕುಟುಂಬಗಳು ಜೇನು ಸಾಕಣೆಯಲ್ಲಿ ಸದ್ಯ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಜೇನುತುಪ್ಪದ ಮಾಧುರ್ಯ ಜನರ ಮೇಲಿದ್ದ ಅಫೀಮು ಕಳಂಕವನ್ನು ಅಳಿಸುತ್ತಿದೆ.

"ಜೇನು ಸಾಕಾಣಿಕೆ ನಂತರ ಅವರ ಸಮಸ್ಯೆಗಳು ಒಂದೊಂದಾಗಿ ದೂರವಾಗತೊಡಗಿವೆ. ಮೂರು ತಿಂಗಳ ಹಿಂದೆ, ತೋಟಗಾರಿಕೆ ಇಲಾಖೆ ಮತ್ತು ಜಾರ್ಖಂಡ್ ಸ್ಟೇಟ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ (ಜೆಎಸ್ಎಲ್ಪಿಎಸ್) ಮೂಲಕ ಜೇನುಸಾಕಣೆಗೆ ಸಂಪರ್ಕ ಕಲ್ಪಿಸಿದರು. ಪ್ರತಿ ಕುಟುಂಬವು ಸುಮಾರು 70 ಕೆಜಿ ಜೇನುತುಪ್ಪವನ್ನು ಉತ್ಪಾದಿಸುತ್ತದೆ" ಎಂಬ ಮಾಹಿತಿಯನ್ನು ಭೀತಡಿಹಾಳದ ಸರಿತಾದೇವಿ ನುಡಿದರು.



ಈ ಪ್ರದೇಶದಲ್ಲಿ ಜೇನುಸಾಕಣೆಯ ಕುರಿತು ಪಲಾಮು ಜಿಲ್ಲಾ ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಕುಮಾರ್​ ಮಾತನಾಡಿ, "ಕೇವಲ ಮೂರು ತಿಂಗಳಲ್ಲಿ ಧನಾತ್ಮಕ ಫಲಿತಾಂಶಗಳು ಬರುತ್ತಿದೆ. ಜೇನು ಸಾಕಣೆಯಿಂದ ಬುಡಕಟ್ಟು ಕುಟುಂಬಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಮುಂದಿನ ದಿನಗಳಲ್ಲಿ ಜೇನು ಕೃಷಿಯ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜೇನುಸಾಕಣೆಗೆ ಗ್ರಾಮಸ್ಥರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಹೆಚ್ಚುವರಿ ಹಣವನ್ನು ಕೋರಲಾಗುವುದು" ಎಂದು ತಿಳಿಸಿದರು.

ಜೆಎಸ್‌ಎಲ್‌ಪಿಎಸ್‌ನ ಮನತು ಬಿಪಿಒ ಕುಮಾರಿ ನಮ್ರತಾ ಮಾತನಾಡಿ, "ಪ್ರಸ್ತುತ ಸ್ಥಳೀಯವಾಗಿ ಗ್ರಾಮಸ್ಥರು ಜೇನು ಮಾರಾಟ ಮಾಡುತ್ತಿದ್ದಾರೆ. ನಂತರ ಅದನ್ನು ಪಲಾಶ್‌ಗೆ ಜೋಡಿಸಿ ಮಾರುಕಟ್ಟೆಯನ್ನು ಸಹ ಲಭ್ಯಗೊಳಿಸಲಾಗುವುದು" ಎಂದು ಅವರು ಹೇಳಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ