ಸಿಂಧನೂರು : ಕರ್ನಾಟಕದ ಕೆ.ಆರ್.ಎಸ್ ಅಣೆಕಟ್ಟಿನಿಂದ ಕಾವೇರಿ ನೀರು ತಮಿಳು ನಾಡಿಗೆ ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರ ಆದೇಶ ನೀಡಿದ್ದು ಇದರ ವಿರುದ್ದ ನಮ್ಮ ಸಂಘನೆಯು ಆ ಭಾಗದ ರೈತರ ಹಿತದೃಷ್ಟಿಯಿಂದ ಮತ್ತು ಮುಂದಿನ ಅವಧಿಯಲ್ಲಿ ಕುಡಿಯುವ ನೀರು ಸಂಗ್ರಹಣೆ ಸಲುವಾಗಿ ಕಾವೇರಿ ನೀರನ್ನು
ತಮಿಳು ನಾಡಿಗೆ ಬಿಡದಂತೆ ಮತ್ತು ಮೇಕೆದಾಟು ಯೋಜನೆ ಅಭಿವೃದ್ಧಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಸಂಘಟನೆಯು ಮಾನ್ಯ ತಹಸಿಲ್ದಾರ್ ಸಿಂಧನೂರು ಅವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ರಾಜ್ಯ ಕಾರ್ಯಧ್ಯಕ್ಷ ಉಮೇಶ್ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟಿಸಿ.
ಈ ವರ್ಷ ಮಳೆಯ ಕೊರತೆಯಿಂದಾಗಿ ಅಣಿಕಟ್ಟು ಭರ್ತಿಯಾಗದೆ ಅಣಿಕಟ್ಟಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತರುಗಳು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಹಿಂದೆ ಮುಂದೆ ನೋಡಿತ್ತಿದ್ದು, ಇದರ ಜೊತೆಗೆ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಮುಂಗಾರು ಬೆಳೆಗಳನ್ನು ಬೆಳದ ರೈತರ ನಷ್ಟ ಅನುಭವಿಸುತ್ತಿದ್ದಾರೆ.
ಕಾವೇರಿ ಮತ್ತು ಮೇಕೆದಾಟು ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ತಪ್ಪು ಹೆಜ್ಜೆಗಳನ್ನು ಹಿಡಿದದ್ದು ಕೆಆರ್‌ಎಸ್ ಅಣೆಕಟ್ಟು ನೀರು ಬಿಡುಗಡೆ ವಿಷಯವಾಗಿ 13 ಆಗಸ್ಟ್ 2026ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಕೆಲ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು ಹಾಗಾಗಿ ರಾಜ್ಯ ಸರ್ಕಾರ ಕರ್ನಾಟಕ ಬಂದ್ ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ರಾಜ್ಯದಲ್ಲಿ ಮಳೆ ಕೊರತೆ ಮತ್ತು ಮುಂಗಾರು ಬೆಳೆ ನಷ್ಟ ಹೊಂದಿ ರೈತರು ಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರವು ಪರಿಗಣಿಸಿ ತಮಿಳ್ನಾಡಿಗೆ ಯಾವುದೇ ಕಾರಣಕ್ಕೆ ನೀರು ಬಿಡದಂತೆ ಕರವೇ ಕನ್ನಡ ಸೇನೆ ಸಂಘಟನೆಯು ಒತ್ತಾಯಪಡಿಸುತ್ತದೆ.
ಈ ಸಂದರ್ಭದಲ್ಲಿ : ರಾಜ್ಯ ಕಾರ್ಯಧ್ಯಕ್ಷ ಉಮೇಶ್ ಗೌಡ ಅರಳಹಳ್ಳಿ. ಉತ್ತರ ಕರ್ನಾಟಕದ ಅಧ್ಯಕ್ಷ ಖಾಜಾ ಬನ್ನಿಗ ನೂರು. ಜಿಲ್ಲಾ ಉಪಾಧ್ಯಕ್ಷ ಪಿ. ರಾಘವೇಂದ್ರ. ನಗರ ಘಟಕ ಅಧ್ಯಕ್ಷ ದಾವಲಸಾಬ್ ದೊಡ್ಡಮನಿ. ಜಿಲ್ಲಾ ಪ್ರ. ಕಾರ್ಯದರ್ಶಿ ಶ್ರೀಕಾಂತ್ ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುನ್ನಟಗಿ ಸೇರಿದಂತೆ ಗ್ರಾಮೀಣ ಘಟಕ ಅಧ್ಯಕ್ಷ ಸಿದ್ದರಾಮೆಶ್ ಸುಲ್ತನಾಪುರ. ಗೌರವಾಧ್ಯಕ್ಷ ಗದ್ಯಪ್ಪ. ಜಿಲ್ಲಾ ಯುವ ಘಟಕ ಅಧ್ಯಕ್ಷ ಪರಶುರಾಮ್ ಗೀತಾ ಕ್ಯಾಂಪ್. ನಗರ ಯುವ ಘಟಕ ಅಧ್ಯಕ್ಷ ಸದ್ದಾಂ ಹುಸೇನ್. ನಗರ ಘಟಕ ತಾಲೂಕ ಉಪಾಧ್ಯಕ್ಷ ರೇಣುಕಾ ಸ್ವಾಮಿ ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.


