ಸಿಂಧನೂರು: ನಗರಸಭೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ 67 ಆಶ್ರಯ ಮನೆಗಳು ಮಂಜೂರಾಗಿದ್ದು ಫಲಾನುಭವಿಗಳ ಪೈಕಿ ಕೆಲವರಿಗೆ ಸ್ವಂತ ನಿವೇಶನ ಲಭ್ಯವಿದ್ದು, ಇನ್ನು ಕೆಲವರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಾದ ಖಾಲಿ ಜಾಗದ ಕೊರತೆಯಿದೆ
ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಶೀಘ್ರವಾಗಿ ನಿರ್ಮಿಸಿ ಕೊಡಬೇಕೆಂದು ಮಾನ್ಯ ತಹಸಿಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು
ಈ ವೇಳೆ ಮಾತನಾಡಿದ ಅವರು ಸಮಾಜದಲ್ಲಿ ಗೌರವಾಯುತ ಹಾಗೂ ಸ್ವಾವಲಂಬಿ ಜೀವನ ನಡೆಸಲು ನಮಗೆ ನಿವೇಶನಗಳ ಅಗತ್ಯವಾಗಿವೆ ನಿವೇಶನ ಇಲ್ಲದ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಸೂಕ್ತ ಖಾಲಿ ಜಾಗವನ್ನು ಗುರುತಿಸಿ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು
ವಸತಿ ಸೌಲಭ್ಯದಿಂದ ವಂಚಿತರಾಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಶಾಶ್ವತ ಸೂರು ಕಲ್ಪಿಸುವುದು ಅಗತ್ಯವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಮಂಜೂರಾಗಿರುವ 67 ಮನೆಗಳ ನಿರ್ಮಾಣ ಕಾರ್ಯವನ್ನು ವಿಳಂಬ ಮಾಡದೆ ಪೂರ್ಣಗೊಳಿಸುವಂತೆ ಲಿಂಗತ್ವ ಅಲ್ಪಸಂಖ್ಯಾತರ ಫಲಾನುಭವಿಗಳು ಕಳಕಳಿಯಿಂದ ಮಾನ್ಯ ತಹಸಿಲ್ದಾರ್ ರರಿಗೆ ಮನವಿ ಮಾಡಿದರು
ಈ ವೇಳೆ:ಮಧು ಜೋಗತಿ.ಜಮುನ .ರೇಷ್ಮಾ. ಸಂಜೀವಿನಿ. ನಾಗಮ್ಮ. ಅಂಜುಶ್ರೀ. ಹುಲಿಗೆಮ್ಮ. ನಂದಿನಿ. ಅಂಬಿಕಾ. ಸುರಕ್ಷಾ. ನೀಲಾ. ಮಹಾಂತಿ. ರತ್ನ. ಉಷಾ.
ಸಂಚಾಲಕ ವೀರೇಶ್ ನಾಯಕ್ ಸೇರಿದಂತೆ ಅನೇಕರು ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


