Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯ

Advertisement
ಸೌಜನ್ಯಳ ಅತ್ಯಾಚಾರ ಕೊಲೆ ಆರೋಪ ಪ್ರಕರಣ

ಕಾಗವಾಡ  : ಧರ್ಮಸ್ಥಳದ ಸೌಜನ್ಯಾಳ ಅತ್ಯಾಚಾರ-ಕೊಲೆಯಾಗಿ 13 ವರ್ಷ ಕಳೆದರು ನ್ಯಾಯ ಸಿಗದೆ ಇರುವುದರಿಂದ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕಾಗವಾಡ ಪಟ್ಟಣದ ಸಮಸ್ತ ಬಹುಜನ ಬಾಂಧವರು. ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಕಾಗವಾಡ ತಹಸಿಲ್ದಾರ ರವಿಂದ್ರ ಹಾದಿಮನಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ.ಅರ್ಪಿಸಿದರು.

ಅವರು ದಿ 9ರಂದು ಗುರುವಾರ ಕಾಗವಾಡ ತಹಸಿಲ್ದಾರ ಕಛೇರಿಗೆ ತರಳಿ ಮನವಿ ಅರ್ಪಿಸಿ ಮಾತನಾಡಿದ ಸಂಘಟನಾಕಾರರು, ದಿನಾಂಕ 09-10-2012 ರಂದು ಧರ್ಮಸ್ಥಳದಲ್ಲಿ ಸೌಜನ್ಯ ಎನ್ನುವ 17 ವಯಸ್ಸಿನ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆಯನ್ನು ಮಾಡಿದ್ದು ಇರುತ್ತದೆ. ಈ ಘಟನೆ ನಡೆದು ಈಗ 13 ವರ್ಷಗಳಾದರು ಇನ್ನು ಸಹಿತ ಅವಳಿಗೆ ನ್ಯಾಯ ದೊರೆತಿರುವುದಿಲ್ಲಾ.

ಈ ಘಟನೆಗೆ ಸಂಬಂದಿಸಿದಂತೆ CBI ವಿಚಾರಣೆ ಆದರು ಸಹಿತ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿತರು ಸಿಕ್ಕಿರುವುದಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಈಗ ಅನೇಕ ಹೊರಾಟಗಳು ನಡೆಯುತಿದ್ದು, ಆದರೆ ಹೊರಾಟ ಮಾಡುವ ಹೊರಾಟಗಾರರನ್ನೆ ಬಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ತಾವು ಸೌಜನ್ಯಳ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯನ್ನು ಮುಚ್ಚಿ ಹಾಕುಲು ಪ್ರಯತ್ನ ಪಡುತ್ತಿರುವವರ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ನಮ್ಮ ಎಲ್ಲ ಸಂಘಟನೆಗಳ ಮುಖಾಂತರ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಂಘಟನಾಕಾರರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಆಕಾಶ್ ದೇವನೆ, ಓಂಕಾರ್ ಚವ್ಹಾಣ ರಾಕೇಶ್ ಕಾಂಬಳೆ ರವೀಂದ್ರ ಕಾಂಬಳೆ ಮಲ್ಲಿಕಾಜುನ್ ಕಾಂಬಳೆ ರೋಹಿತ್ ಕಾಂಬಳೆ ಇತರರು ಇದ್ದರು.

ವರದಿ : ಚಂದ್ರಕಾಂತ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ