Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇತಿಹಾಸ ಮರೆತರೆ ನಮ್ಮನ್ನು ನಾವು ಮರೆತಂತೆ: ಪರಶುರಾಮ ಗಸ್ತೆ.

Advertisement
ಗೋಕಾಕ : ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಗೋಕಾಕ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಅಭಿಪ್ರಾಯಿಸಿದರು.

ತಾಲೂಕಾಡಳಿತ,ತಾಲೂಕಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ
ಗೋಕಾಕಕದ ಸಮುದಾಯ ಭವನದಲ್ಲಿ‌ ಕಾಯಕ ಶರಣರ ವಚನಕಾರರ ಜಯಂತಿ ಉತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬನ್ನವರ ಇವರಿಂದ ಸತ್ಕಾರ ಸ್ವಿಕರಿಸಿ ಮಾತನಾಡಿ

ಇತಿಹಾಸ ಮರೆತರೆ ನಮ್ಮನ್ನು ನಾವು ಮರೆತಂತೆ ಇವತ್ತು ದಲಿತ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲಿಯೂ ಅಬಿವೃದ್ದಿ ಹೊಂದಿದ್ದಾರೆ, ಅದಕ್ಕೆಲ್ಲಾ ಕಾರಣ ಕಾಯಕ ಮಾಡಿದಂತಹ ಶರಣರು ಹಾಕಿ ಕೊಟ್ಟ ಮಾರ್ಗ ಎಂದರು.

ಇನ್ನು ತಹಸಿಲ್ದಾರ ಮೊಹನ ಬಸ್ಮೆ ಮಾತನಾಡಿ 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕಾಯಕ ಮಾಡದವರು ನಾಯಕರಾಗೊದಿಲ್ಲ, ಇವತ್ತು ನಾವೆಲ್ಲರೂ ಆಚರಣೆ ಮಾಡುತ್ತಿರುವ ಶರಣರ ಕಾಯಕವೆ ಕಾರಣ, ಜಯಂತಿಗಳು ಬಂದಾಗ ಕೇವಲ ಪೊಟೊ ಪೂಜೆಗಾಗಿ ಸಿಮಿತಾಗಬಾರದು.ಪೊಟೊ ಶಾಶ್ವತವಲ್ಲ ಪೊಟೊದಲ್ಲಿ ಉಳಿಯಬಹುದು ಆದರೆ ಮನಸ್ಸಿನಲ್ಲಿ ಉಳಿಯೊದಿಲ್ಲ,ಡಾ: ಬಾಬಾಸಾಹೇಬ ಅಂಬೇಡ್ಕರ ಅವರಿಗೂ ಕೂಡ ಪೋಟೊ ಅಂದರೆ ಇಷ್ಟವಿರಲಿಲ್ಲ,ಮನಸ್ಸಿನಲ್ಲಿ ಉಳಿಯಬೇಕಾದರೆ ಮನಸ್ಸಿನಿಂದ ಕಾಯಕ ಮಾಡಬೇಕೆಂದರು.

ಉಪನ್ಯಾಸಕರಾಗಿ ಆಗಮಿಸಿದ ಜಯಾನಂದ ಮಾದರ ಇವರು
ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.ಶರಣದ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.

ಜಯಂತಿಯಲ್ಲಿ ಬಾಗವಾಹಿಸಿದ್ದ ಎಲ್ಲರೂ ಸಂವಿಧಾನ ಪೀಠಿಕೆ ಒದಿದರು.ನಂತರ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ 17 ಜನ ದಲಿತ ಕಲಾವಿದರಿಗೆ,ವಚನಕಾರರಿಗೆ,ಸನ್ಮಾನಿಸಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಈ ಸಂದರ್ಬದಲ್ಲಿ ನಗರಸಭೆ ಅದ್ಯಕ್ಷ ಪ್ರಕಾಶ ಮುರಾರಿ ,ನಗರ ಸಭೆ ಆಯುಕ್ತ ರಮೇಶ ಜಾದವ,ಮಾಜಿ ಉಪಾದಕ್ಷ ಬಸವರಾಜ ಆರೆನ್ನವರ,ವೀರಭದ್ರ ಮೈಲನ್ನವರ, ಗೊವಿಂದ ಕಳ್ಳಿಮನಿ, ಮಾಜಿ ಜಿಲ್ಲಾ ಸದಸ್ಯ ಸುದೀರ ಜೊಡಟ್ಟಿ,ಅಜೀತ ಅಕ್ಕತಂಗೇರಹಾಳ ರಾಮಪ್ಪ ಮರೆಪ್ಪಗೋಳ,ರವಿ ಕಡಕೋಳ,ಶ್ರೀಮತಿ ಕಮಲಾ ಕರೆಮ್ಮನ್ನವರ, ಸುಂದ್ರವ್ವಾ ಕಟ್ಟಿಮನಿ,ಬಾಳೇಶ ಸಂತವ್ವಗೋಳ,ರಮೇಶ ,ಸತೀಶ ಹರಿಜನ ಸೇರಿದಂತೆ ಸಮಾಜ ಕಲ್ಯಾಣ ಸಿಬ್ಬಂದಿಗಳು ಉಪಸ್ಥಿತರಿದ್ದರು,
ಸಮಾಜ ಕಲ್ಯಾಣ ಇಲಾಖೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬನ್ನವರ ಇವರು ಎಲ್ಲರನ್ನು ಅಭಿನಂದಿಸಿದರು.

ವರದಿ : ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ