ಸಿಂಧನೂರು:ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಸುಭಿಕ್ಷತೆ ನೆಲೆಸಲಿ ಹಾಗೂ ಜನರ ಸರ್ವಾಂಗೀಣ ಅಭಿವೃದ್ಧಿ ಕಲ್ಯಾಣ ವಾಗಲಿ ಎಂದು ಜೆಡಿಎಸ್,ಮಾಜಿ ಸಚಿವ ಹಾಗೂ ಕೆಓಎಫ್ ರಾಜ್ಯ ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ್ರು ತಮ್ಮ ಮನೆ ದೇವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. 
ನಂತರ ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡ ವೇದಿಕೆ ಮೇಲೆ ವಿವಿಧ ಮಠಾಧೀಶ್ವರರು ಮಳೆಗಾಗಿ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆ ಹೊಸಳ್ಳಿ (ಇ.ಜೆ) ಅಮರಾಪುರ. ಸಾಸಲಮರಿ ಕ್ಯಾಂಪ್ ರೌಡಕುಂದಾ ಹಾಗೂ ಸೋಮಲಪುರ ಗ್ರಾಮದ ಮೂಲಕ ಅಂಬಾಮಠ ಶ್ರೀಅಂಬಾದೇವಿ ದೇವಸ್ಥಾನ ತಲುಪಿ ಅಂಬಾ ದೇವಿಗೆ,ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಮಾಜಿ ಸಚಿವರೊಂದಿಗೆ ಕಾರ್ಯಕರ್ತರು, ಅಭಿಮಾನಿಗಳು ಊರಿನ ಮುಖಂಡರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾನ್ವಿ ಜೆಡಿಎಸ್ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ. ಧರ್ಮನ ಗೌಡ ಮಲ್ಕಾಪುರ. ಜಿ. ಸತ್ಯನಾರಾಯಣ ಹಂಚಿನಾಳ. ನಾಗೇಶ್ ಹಂಚಿನಾಳ. ವೆಂಕಟೇಶ. ವೆಂಕೋಬಣ್ಣ ಕಲ್ಲೂರು. ಎಸ್ ದೇವೇಂದ್ರ ಗೌಡ ಹೊಸಳ್ಳಿ ( ಇ.ಜೆ) ರವಿ ಪನ್ನಾಪುರ. ಅಲ್ಲಮಪ್ರಭು ಪೂಜಾರ್. ಅಶೋಕ್ ನಂಜಲದಿನ್ನಿ. ಲಕ್ಷ್ಮಣ ಭೋವಿ. ಗುರುರಾಜ ಮುಕ್ಕುಂದ. ವೆಂಕಟೇಶ್ ಗಿರಿಜಾಲಿ. ಜಗದೀಶ್ ವಕೀಲರು ಸೇರಿದಂತೆ ಸಾವಿರಾರು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ವರದಿ:ಬಸವರಾಜ ಬುಕ್ಕನಹಟ್ಟಿ


