Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟು ಬಿಡದ ರೈತ ಸಂಘಟನೆಯಿಂದ 4ನೇ ದಿನವೂ ವಾಹನ ತಡೆದು ಪ್ರತಿಭಟನೆ

Advertisement
-----------------------------------------------ಕಬ್ಬು ದರ ನಿಗದಿ ಮಾಡದ ಕಾರ್ಖಾನೆಗಳು!

ನಿಪ್ಪಾಣಿ:   ಕೊಲ್ಲಾಪುರ ಜಿಲ್ಲೆಯ ಬಿದ್ರಿ ಸಕ್ಕರೆ ಕಾರ್ಖಾನೆಗಳು 3614ರೂಪಾಯಿ ಧರಘೋಷಿಸಿದೆ. ಆದರೆ ಕರ್ನಾಟಕದಲ್ಲಿಯ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ದರಘೋಷಿಸದೆ ಕಬ್ಬು ಕಟಾವಿಗೆ ಅನುಮತಿ ನೀಡುತ್ತಿದ್ದು ಬಿದ್ರಿ ಸಕ್ಕರೆ ಕಾರ್ಖಾನೆ ನೀಡಿದ ದರದಂತೆ ಮುಷ್ಕರದಿಂದ ತಡೆ ಹಿಡಿಯಲಾದ ಕಬ್ಬು ತುಂಬಿದ ವಾಹನಗಳನ್ನು ಈ ಕಾರ್ಖಾನೆಗೆ ಕಳಿಸಲಾಗುವುದು.ಎಂದು ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ ತಿಳಿಸಿದರು.



ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಸರ್ಕಲದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕಬ್ಬು ದರ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ರೈತ ಸಂಘಟನೆಯ ಪ್ರತಿಭಟನೆ ಯಲ್ಲಿ ಮಾತನಾಡಿದರು. ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿಯ ಗುರ್ಲಾಪುರ್ ನಿಪ್ಪಾಣಿ, ಭೋಜ, ಬೇಡಕಿಹಾಳ, ಶಮನೆವಾಡಿ ಗ್ರಾಮಗಳಲ್ಲಿ ರೈತ ಸಂಘಟನೆಗಳು ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ ಟ್ರಾಲಿ ಗಳನ್ನು ತಡೆದು ಕಳೆದ ಶನಿವಾರ (ದಿನಾಂಕ 1ರಿಂದ)ಪ್ರತಿಭಟನೆ ನಡೆಸಿದ್ದು. ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ಸಂಜೆ ಶಮನೆ ವಾಡಿ ಗ್ರಾಮದಲ್ಲಿ ಕಾಗಲ್, ಹುಪರಿ ಕೊಲ್ಲಾಪುರ್ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದ 40ಕ್ಕೂ ಅಧಿಕ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ತಡೆದು ಪ್ರತಿಭಟನೆ ನಡೆಸಿದ್ದಾರೆ.ಈ ಸಂಧರ್ಭದಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ರಾಜು ಖಿಚಡೆ, ಮಾತನಾಡಿ ಎಲ್ಲಿಯ ವರೆಗೆ ಕಾರ್ಖಾನೆಗಳು ನಮ್ಮ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ ಘೋಷಿಸುವುದಿಲ್ಲಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಖಡಾ ಖಂಡಿತವಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಡ್ರೈವರ್, ರೈತ ಸಂಘಟನೆ ಹಾಗೂ ಜವಾಹರ ಕಾರ್ಖಾನೆ ಸಿಡಿಓ ಮಧ್ಯೆ ಕೆಲಕಾಲ ವಾದ-ವಿವಾದ ನಡೆಯಿತು. ಪ್ರತಿಭಟನೆಯಲ್ಲಿ ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ, ಸ್ವಾಭಿಮಾನಿ ರೈತ ಸಂಘಟನೆಯ ಕಾರ್ಯಕರ್ತರಾದ ಶೀತಲ ಬಾಗೆ, ಬಾಬಾಸಾಬ ಖೋತ ಪೋಪಟ ಗೇಬಿಸೇ ಪಂಕಜ ತಿಪ್ಪಣ್ಣವರ, ಸುಭಾಷ್ ಚೌಗಲೆ ಪ್ರಕಾಶ ಖೋತ, ಪ್ರಮೋದ್ ಪಾಟೀಲ್ ಸ್ವಯಂ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ