LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಫ್‌ಬಿಟಿ ಆ್ಯಪ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ

Advertisement

ಕಲಘಟಗಿ: ತಾಲೂಕಿನಲ್ಲಿ ಮತ್ತೊಂದು ಬೃಹತ್ ಹಣ ವಂಚನೆ ಜಾಲಕ್ಕೆ ಜನ ತುತ್ತಾಗಿದ್ದು, ಮೊಬೈಲ್‌ಗಳಲ್ಲಿ ಆನ್‌ಲೈನ್ ಆ್ಯಪ್ ಮುಖಾಂತರ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ ಎಂಬ ಬಣ್ಣದ ಮಾತು ನಂಬಿದ ತಾಲೂಕಿನ ಸಾವಿರಾರು ಮುಗ್ಧ ಜನ ತಮ್ಮ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಪ್ಯೂಚರ್ ಬುಕ್ಸ್ ಟೆಕ್ನಾಲಜಿ ಎಂಬ ಕಂಪೆನಿಯು ತನ್ನ ಆ್ಯಪ್‌ನಲ್ಲಿ ತಾವು ನೀಡುವ ಕಥೆ, ಕಾದಂಬರಿಗಳನ್ನು ಮನೆಯಲ್ಲಿ ಕೂತು ಗ್ರಾಹಕರು ಕೆಲ ನಿಮಿಷಗಳ ಕಾಲ ಓದಿದರೆ ಹಣ ಕೊಡ್ತವೆ ಎಂದು ಕಂಪನಿ ಪ್ರಚಾರ ಮಾಡಿ, ಗ್ರಾಹಕರು ಅದಕ್ಕಾಗಿ ಮೊದಲು 18,502 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.
ಹಣ ಪಾವತಿಸಿದವರಿಗೆ ಪ್ರತಿ ದಿನ 22 ಟಾಸ್ಕ್‌ಗಳ ನೀಡಲಾಗುತ್ತಿತ್ತು. ಒಂದು ಟಾಸ್ಕ್ ಮಾಡಿದರೆ 29 ರೂಪಾಯಿಯಂತೆ 22 ಟಾಸ್ಕ್ ಪೂರ್ಣಗೊಳಿಸಿದವರಿಗೆ 638 ರೂಪಾಯಿ ಪಾವತಿ ಮಾಡಲಾಗತ್ತಿತ್ತು ಎಂದು ಜನ ಹೇಳಿಕೊಂಡಿದ್ದಾರೆ. ಪ್ರತಿ ಮಂಗಳವಾರ ಹಣ ವ್ಯಾಲೆಟ್ ಮೂಲಕ ಪೇಮೆಂಟ್ ಆಗುತ್ತಿತ್ತು ಹೀಗಾಗಿ ಸಾವಿರಾರು ಜನರು ಹಣ ಪಾವತಿ 
ಮಾಡಿದ್ದರು.

ಯಾವಾಗ ಹಣ ಮರುಪಾವತಿಯಾಗಲಿಲ್ಲವೋ ಆಗ ನೋಂದಣಿ ಮಾಡಿಕೊಂಡವರು ಕಂಗಾಲಾಗಿದ್ದಾರೆ.ಆನ್‌ಲೈನ್‌ನಲ್ಲಿ ಕಥೆ-ಕಾದಂಬರಿ ಓದಿ ಹಣ ಗಳಿಸಿ ఎంబ ಆಮಿಷಕ್ಕೆ ಒಳಗಾಗಿ 'ಪ್ಯೂಚರ್ ಬುಕ್ಸ್ ಟೆಕ್ನಾಲಜಿ' ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ ಕಲಘಟಗಿ ತಾಲೂಕಿನ ಸಾವಿರಾರು ಮುಗ್ಧ ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.
ಆ್ಯಪ್ ಕೂಡಾ ಸ್ಥಗಿತವಾಗಿದ್ದರಿಂದ ತಾವು ಮೋಸ ಹೋಗಿದ್ದೇವೆ ಅನ್ನೋದನ್ನು ಅರಿತ ಜನ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್