ಮಾನ್ವಿ: ತಾಲೂಕಿನ ಕಪಗಲ್ ಗ್ರಾಮದಲ್ಲಿ ಯೋಗಸನ್ನಿಧಿ ಟ್ಟಸ್ಟ್ ವತಿಯಿಂದ ಹಮ್ಮಿಕೊಂಡ ನಶೆಮುಕ್ತ ಭಾರತಕ್ಕಾಗಿ ಒಂದು ಮಹಾಭಿಯಾನ ಕಾರ್ಯಕ್ರಮ ಅಂಗವಾಗಿ ಗ್ರಾಮದ ಸಾರ್ವಜನಿಕರಿಗೆ ನಶೆಮುಕ್ತ ಭಾರತ ನಿರ್ಮಾಣಕ್ಕಾಗಿ ಒಂದು ಸಂಕಲ್ಪ ಅಭಿಯಾನ ಹಾಗೂ ಯೋಗಭ್ಯಾಸ ಅರಿವು ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಯೋಗಸನ್ನಿಧಿ ಟ್ಟಸ್ಟ್ನ ಯೋಗಗುರುಗಳಾದ ಅನ್ನದಾನಯ್ಯಸ್ವಾಮಿ ಮಾತನಾಡಿ ಮಾನ್ವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯೋಗಸನ್ನಿಧಿ ಟ್ಟಸ್ಟ್ ವತಿಯಿಂದ ಗ್ರಾಮದ ಜನರ ನಶೆಯ ಜೀವನಕ್ಕೆ ಕಾರಣವಾದ ದುಷ್ಚಟಗಳ ಬಗ್ಗೆ ಹಾಗೂ ಅವುಗಳಿಂದ ದೇಹದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೋತೆಗೆ ನಿತ್ಯ ಸ್ವಲ್ಪ ಸಮಯ ಯೋಗ ಮತ್ತು ಧ್ಯಾನ,ಪ್ರಾಣಯಾಮವನ್ನು ಅಭ್ಯಾಸ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ ಎಂದು ತಿಳಿಸುವುದಕ್ಕಾಗಿ ಆ.25 ರವರೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತವಾಗಿ ಯೋಗಭ್ಯಾಸ ತರಬೇತಿಯನ್ನು ಕೂಡ ಉಚಿತವಾಗಿ ನೀಡಲಾಗುತ್ತಿದು ಗ್ರಾಮದ ಜನರು ಉಚಿತ ಯೋಗ ಶಿಬಿರದ ಸದುಪಯೊಗವನ್ನು ಪಡೆದು ಕೊಂಡು ದುಷ್ಚಟಗಳಿಂದ ಮುಕ್ತರಾಗಿ ಉತ್ತಮ ಜೀವನವನ್ನು ನಡೆಸಿ ಎಂದು ಕರೆ ನೀಡಿದರು.
ಗ್ರಾಮದ ಯುವಕರಾದ ಪ್ರದೀಪ್ ಯಲ್ಲಲಿಂಗ ಬಸನಗೌಡ. ವಿಶ್ವನಾಥ ಬಸ್ಸಮ್ಮ ಅನುರಾಧ ರಾಜಮ್ಮ ಸೇರಿದಂತೆ ಇನ್ನಿತರರು ಇದ್ದರು.
ವರದಿ : ಆಂಜನೇಯ ನಸಲಾಪುರ


