LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಲ್ಲಿಂದ ಹಣ ಕೊಡಲಿ : ಕಬ್ಬು ಬೆಳೆಗಾರರ ಜೊತೆಗಿನ ಸಿಎಂ ಸಭೆ ವಿಫಲ

Advertisement

ಬೆಳಗಾವಿ: ಕಬ್ಬು ಪ್ರೋತ್ಸಾಹಧನ ನಿಗದಿ ಸೇರಿ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಾರದೆ ವಿಫಲಗೊಂಡಿದೆ.

ತಮಿಳುನಾಡು ಮಾದರಿಯಲ್ಲಿ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ಘೋಷಣೆಗೆ ರೈತರು ಪಟ್ಟು ಹಿಡಿದರೆ, ಎಂಎಸ್‌ಪಿ (ಸಕ್ಕರೆಯ ಕನಿಷ್ಠ ಮಾರಾಟ ಬೆಲೆ) ಹೆಚ್ಚಳವಾಗದ ಹೊರತು ಹೆಚ್ಚುವರಿ ದರ ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದರು.

ಇದೇ ವೇಳೆ, ರೈತರು ಕೇಳಿದಷ್ಟು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ, ರೈತರ ಬೇಡಿಕೆ ಪರಿಶೀಲನೆಗೆ ಸಮಯಾವಕಾಶ ಬೇಕು ಎಂದು ಸಿಎಂ ಕೋರಿದರು. ಆದರೆ ಇದಕ್ಕೆ, ರೈತರು ಇದಕ್ಕೆ ಒಪ್ಪಲಿಲ್ಲ.

ಈ ಹಿನ್ನೆಲೆಯಲ್ಲಿ, 'ಕಬ್ಬಿಗೆ ರಾಜ್ಯ ಸರ್ಕಾರ ₹1,000 ಹೆಚ್ಚುವರಿ ನೆರವು ಘೋಷಿಸುವವರೆಗೂ ಬೆಳಗಾವಿ ಜಿಲ್ಲೆ ಗುರ್ಲಾಪುರದಲ್ಲಿ ನಡೆಯುತ್ತಿರುವ ರೈತರ ಹೋರಾಟ ಮುಂದುವರಿಯಲಿದೆ.

 ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಆದರೆ, ಕರ್ನಾಟಕ ಬಂದ್‌ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ' ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.

ಪ್ರತ್ಯೇಕ ಸಭೆ:

ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗೆ ಸಿಎಂ ಅವರು ಸಕ್ಕರೆ ಕಾರ್ಖಾನೆಗಳ ಮಾಲಿಕರೊಂದಿಗೆ ಸಭೆ ನಡೆಸಿದರು.

 ಆದರೆ, ರೈತರ ಬೇಡಿಕೆಯಂತೆ ಕಬ್ಬಿಗೆ ಹೆಚ್ಚಿನ ದರ ನೀಡಬೇಕಾದರೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳ ಅಗತ್ಯ. ಕಾರ್ಖಾನೆಗಳಿಂದ ಎಥೆನಾಲ್ ಖರೀದಿ ಪ್ರಮಾಣವನ್ನೂ ಹೆಚ್ಚಿಸಿದರೆ ಮಾತ್ರ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಲಿದೆ ಎಂದು ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿಪಾದಿಸಿದರು.

ಬಳಿಕ, ನಿಗದಿತ ಅವಧಿಗಿಂತ 3 ಗಂಟೆ ತಡವಾಗಿ, ಸಂಜೆ 6 ಗಂಟೆಗೆ ರೈತರ ಜೊತೆಗಿನ ಸಭೆ ಆರಂಭವಾಯಿತು. ಸುಮಾರು ಎರಡು ಗಂಟೆಗಳ ಕಾಲ ರೈತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಎಸ್‌ಎಪಿ ಘೋಷಣೆಗೆ ರೈತರ ಪಟ್ಟು ಹಿಡಿದು, ಈ ಕ್ಷಣವೇ ಸಿಹಿ ಸುದ್ದಿ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಆಗ್ರಹಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ, 'ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಸಕ್ಕರೆ ಎಂಎಸ್‌ಪಿ ಹೆಚ್ಚಾಗುವವರೆಗೆ ನಾವು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಇಂದೇ ಸಿಹಿ ಸುದ್ದಿ ನೀಡಿ ಎಂದರೆ ಎಲ್ಲಿಂದ ಹಣ ನೀಡಬೇಕು? ಜೇಬಲ್ಲಿ ದುಡ್ಡಿದ್ದರೆ ತಾನೇ ಕೊಡಲು ಸಾಧ್ಯ. ಇದು ಆತುರ, ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರವಲ್ಲ. ಕಾಲಾವಕಾಶ ನೀಡಿ' ಎಂದು ಮನವಿ ಮಾಡಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಕ್ಷೇತ್ರ ಸಿದ್ದನಕೊಳ್ಳ ಕಲಾಪೋಷಕರ ಹಾಗೂ ನಿರಂತರ ದಾಸೋಹ ಮಠಕ್ಕೆ :  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬಸವರಾಜ ಆಗ್ರಹ ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿ : ಔಷಧಿಗಳ ಬೆಲೆ ಶೇ.70ರಷ್ಟು ಕಡಿತವಿಚ್ಛೇದನಕ್ಕೆ ಒಪ್ಪಲಿಲ್ಲವೆಂದು ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪಾಪಿ ಪತಿತ್ರಿಕೋನ ಏಕದಿನ ಸರಣಿ: ಪಾಕಿಸ್ತಾನ- ಶ್ರೀಲಂಕಾ ಪಂದ್ಯ ಇಂದು ಬೈಲ್ ಮರ್ಚೆಡ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮದಿಂದ ಆಚರಣೆಎಂಎಸ್‌ಪಿ ಆಗ್ರಹ ಯಥನಾಲ್ ಖರೀದಿಸದ ಕೇಂದ್ರದ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಅಸಮಾಧಾನದ. ಆಪ್ರಿಕಾ- ಆಸ್ಟ್ರೇಲಿಯಾ ನಿರ್ಣಾಯಕ ಟೆಸ್ಟ್ ಇಂದಿನಿಂದ ಭಾರತ- ಕಿವೀಸ್ 3 ನೇ ಟಿ-20 ಪಂದ್ಯ ಇಂದು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ : ಇಂದು ಮತ ಎಣಿಕೆ ಅಯೋಧ್ಯೆ ರಾಮಮಂದಿರ : ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ