ಕೇಪಟೌನ್: ಆಸ್ಟ್ರೇಲಿಯಾ ಹಾಗೂ ದ. ಆಪ್ರಿಕಾ ಕ್ರಿಕೆಟ್ ತಂಡಗಳ ನಡುವಿನ 3 ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಇಲ್ಲಿನ ಎಸ್ ಪ್ಲೆ ನ್ಯೂ ಲೆಂಡ್ಸ್ ಮೈದಾನದಲ್ಲಿ ಇಂದಿನಿಂದ ಶುರುವಾಗುತ್ತಿದೆ.
ಪಂದ್ಯ ಮದ್ಯಾನ್ಹ 2 ಕ್ಕೆ ಆರಂಭವಾಗುತ್ತಿದೆ. ಮೊದಲ 2 ಟೆಸ್ಟ್ ಪಂದ್ಯಗಳ ಪೈಕಿ ತಲಾ 1 ರಲ್ಲಿ ಉಭಯ ತಂಡಗಳು ಗೆದ್ದಿದ್ದು, ಸರಣಿ ಈಗ 1-1 ರ ಸಮ ಸ್ಥಿತಿಯಲ್ಲಿವೆ. ಈ ಟೆಸ್ಟ್ ನಲ್ಲಿ ಗೆದ್ದ ತಂಡ ಸರಣಿ ಗೆಲ್ಲಲಿದೆ. ಹೀಗಾಗಿ ಇಂದಿನಿಂದ ಆರಂಭವಾಗುತ್ತಿರುವ ಟೆಸ್ಟ್ ತೀವ್ರ ಕುತೂಹಲ ಕೆರಳಿಸಿದೆ.


