ಮೈಸೂರು: ತ್ರಿಪುರಾ ಕ್ರಿಕೆಟ್ ತಂಡವು ಕರ್ನಾಟಕ ವಿರುದ್ಧ ಇಂದಿಲ್ಲಿ ಶುರುವಾಗಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯದ ಮೊದಲ ದಿನ ಭೋಜನ ವಿರಾಮಕ್ಕೆ 2 ವಿಕೆಟ್ ಗೆ 88 ರನ್ ಗಳಿಸಿತ್ತು.
ಇಲ್ಲಿನ ಶ್ರೀಕಂಠದತ್ ನರಸಿಂಹರಾಜ್ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ಇಂದು ಮುಂಜಾನೆ ಕರ್ನಾಟಕ ತಂಡವು ಮೊದಲು ಬೌಲಿಂಗ್ ಆರಿಸಿಕೊಂಡಿತು.


