LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಲಾದಗಿಯಲ್ಲಿ ಸಕ್ಕರೆಯ ಬಗೆ ಬಗೆಯ ಗೊಂಬೆಗಳ ವೈಭವ : ಖರೀದಿ ಬಲು ಜೋರು. 

Advertisement

ಕಲಾದಗಿ : ಗೌರಿ ಹುಣ್ಣಿಮೆ ಬಂತೆಂದರೆ ಸಾಕು ವಿಶಿಷ್ಟ ಆಕಾರದ ಸಕ್ಕರೆಯ  ಗೊಂಬೆಗಳ ವೈಭವ  ಇದೆಲ್ಲ ಖರೀದಿಗಾಗಿ ಮುಗಿಬಿದ್ದಿರೋ ಗ್ರಾಹಕರು ಈ ಸಿಹಿತಿಂಡಿಗಳಿಗೂ ಗೌರಿ ಹುಣ್ಣಿಮೆಗೂ ಅವಿನಾಭಾವ ಸಂಬಂಧ  ವಿಶೇಷವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ

ಕೆಲ ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಿ ವಿಗ್ರಹಕ್ಕೆ ಗೌರಿ ಹುಣ್ಣುಮೆಯ ರಾತ್ರಿಯಂದು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನಿರಿಸಿ ಹಾಗೂ  ದೀಪ ಹಚ್ಚಿ ಮಹಿಳೆಯರು ಗೌರಮ್ಮನ ವಿಗ್ರಹಕ್ಕೆ ಆರತಿ  ಬೆಳಗುತ್ತಾರೆ ಕುಟುಂಬದ ಸದಸ್ಯರು ನೆರೆ ಹೊರೆಯವರಿಗೆ ಆರತಿ ಬೆಳಗುವ ಸಂಪ್ರದಾಯ ಇದೆ.

ಸಕ್ಕರೆ ಗೊಂಬೆಗಳಿಲ್ಲದಿದ್ದರೆ ಗೌರಿ ಹುಣ್ಣಿಮೆ ಆಚರಣೆ ಅಪೂರ್ಣ ಅನೇಕ ಕುಟುಂಬಗಳು ತಿಂಗಳ ಮೊದಲೇ ಸಕ್ಕರೆ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿ ಮಾರಾಟ ಮಾಡಲು ಅಣಿಯಾಗಿವೆ

ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆಯಾಗಿದೆ ಶುದ್ಧ ಸಕ್ಕರೆ ಪ್ರಮಾಣಕ್ಕೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ರೀತಿ ಕಾಯಿಸಲಾಗುತ್ತದೆ ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆ ಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.

ಸಾರ್ವಜನಿಕರ ಹಾಗೂ ಮಹಿಳೆಯರ ಭಕ್ತಿ, ಭಾವನೆಗಳಿಗೆ ತಕ್ಕಂತೆ ಶಿವ, ಪಾರ್ವತಿ, ಒಂಟೆ, ಆನೆ, ರಥ,‌ ನವಿಲು, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ವಿವಿಧ ಪಶುಪಕ್ಷಿಗಳು ಸಕ್ಕರೆಯಲ್ಲಿ ಅರಳುತ್ತವೆ.

ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿನ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಹೋಗುತ್ತಾರೆ.


ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವಾತಂತ್ರ್ಯದ ಕಹಳೆ ಮೊಳಗಿಸಿ ಕ್ರಾಂತಿಯ ಕಿಡಿ ಹೊತ್ತಿಸಿದ ದಿಟ್ಟ ಮಹಿಳೆ ಚನ್ನಮ್ಮ: ಮುರಳ್ಳಿ ಕಲಾದಗಿಯಲ್ಲಿ ಸಕ್ಕರೆಯ ಬಗೆ ಬಗೆಯ ಗೊಂಬೆಗಳ ವೈಭವ : ಖರೀದಿ ಬಲು ಜೋರು. ರಾಜಲದಿನ್ನಿಯಲ್ಲಿ ಸಡಗರ-ಸಂಭ್ರಮದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಕರಡಿಗುಡ್ಡ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಫಿಲ್ಡಿಂಗ್ ಅರಿಸಿಕೊಂಡ ಕರ್ನಾಟಕ: ತ್ರಿಪುರಾ 2 ವಿಕೆಟ್ ಗೆ 88ದ್ವಿ ಶತಕದ ಅಂಚಿನಲ್ಲಿ ಅನುಮಾನಾಸ್ಪದ ತೀರ್ಪಿಗೆ ನಿರ್ಗಮಿಸಿದ ಕನ್ನಡಿಗ ದೇವದತ್ ಪಡಿಕಲ್ 2 ನೇ ಇನ್ನಿಂಗ್ಸ್ ನಲ್ಲಿ ಚೇತರಿಸಿಕೊಂಡ ಭಾರತ ಎ ಮದುವೆ ಮುರಿದು ಬಿದ್ದಿದ್ದಕ್ಕೆ ಐಇಡಿ ಸ್ಪೋಟ : ಬೆಂಗಳೂರಲ್ಲಿ ಮೂವರು ಆರೋಪಿಗಳು ಅರೆಸ್ಟ್! ನರ್ಮದಾ ನದಿಯಲ್ಲಿ ನೂರಾರು ಮತದಾರರ ಗುರುತಿನ ಚೀಟಿಗಳು ಪತ್ತೆ: ಸಮಗ್ರ ತನಿಖೆಗೆ ಕಾಂಗ್ರೆಸ್ ಆಗ್ರಹ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡಕ್ಕೆ 1 ವಿಕೆಟ್ ರೋಚಕ ಜಯ