ಮೈಸೂರು: ಕರ್ನಾಟಕ ಕ್ರಿಕೆಟ್ ತಂಡವು ಇಂದಿಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯದ ಮೊದಲ ದಿನ ತ್ರಿಪುರಾ ತಂಡವನ್ನು 194 ರನ್ ಗಳಿಗೆ ಕಟ್ಟಿ ಹಾಕಲು ಯಶಸ್ವಿಯಾಯಿತು.
ಇಲ್ಲಿನ ಶ್ರೀಕಂಠದತ್ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ಮೊದಲ ದಿನ ಆಟ ಮುಗಿದಾಗ ಕರ್ನಾಟಕ ತಂಡವು ತ್ರಿಪುರಾ ತಂಡದ 194 ರನ್ ಗಳಿಗೆ ಉತ್ತರವಾಗಿ ಬ್ಯಾಟ್ ಮಾಡುತ್ತ 1 ವಿಕೆಟ್ ಗೆ 10 ರನ್ ಗಳಿಸಿತ್ತು.
ಸ್ಕೊರ್ ವಿವರ
ತ್ರಿಪುರಾ ಮೊದಲ ಇನ್ನಿಂಗ್ಸ್ 194
ಬಿ. ದಾಸ್ 51, ಬಿ. ದೇಬನಾಥ್ 36.
ಎಸ್. ಶೆಟ್ಟಿ 54 ಕ್ಕೆ 5, ಎಂ. ಕುಮಾರ್ 23 ಕ್ಕೆ 3


