Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ : ವಿಶೇಷ ತನಿಖಾ ತಂಡ ರಚನೆ

Advertisement

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚನೆ ಮಾಡಿದೆ.

ಬೆಂಗಳೂರಿನ ಕಗ್ಗಲಿಪುರದ ತಾಅತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು.ಜಿಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ್ ಓರ್ವನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಗೆ ರಾಮನಗರ ಡಿವೈ ಎಸ್ ಪಿ ಶ್ರೀನಿವಾಸ್ ನೇತೃವತದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ತನಿಖಾ ತಂಡದಲ್ಲಿ ನಾಲ್ವರು ಇನ್ಸ್ ಪೆಕ್ಟರ್ ಗಳು ಸೇರಿ ಒಟ್ಟು 50 ಸಿಬ್ಬಂದಿಗಳು ಇರಲಿದ್ದಾರೆ. ಒಟ್ಟು ಆರು ತಂಡಗಳನ್ನು ರಾಮನಗರ ಎಸ್ ಪಿ ರಚನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ಆರ್ಟ್ ಆಫ್ ಲಿವಿಂಗ್ ನ 47ನೇ ವಾರ್ಷಿಕ ಕಾರ್ಯಕ್ರಮ ಹಾಗೂ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಗೆ ಭೇಟಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಅವರು ಸಂಚರಿಸುವ ರಸ್ತೆಯ ಬಳಿ ಕಗ್ಗಲಿಪುರದ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ಇದೇ ಮಾರ್ಗವಾಗಿ ಪ್ರಧಾನಿ ಮೋದಿ ಸಂಚರಿಸಿದ್ದು, ಈ ವೇಳೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆಶ್ರಮದ ಕಾರ್ಯಕ್ರಮದಿಂದ 2 ಕಿ.ಮೀ ದೂರದಲ್ಲಿ ಪ್ರಧಾನಿ ಮೋದಿ ತೆರಳುವ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ 1ರಿಂದಲೇ ನರೇಗಾ ಹೊಸ ಸ್ವರೂಪ ವಿಕ್ಷಿತ ಭಾರತ್ ಜಿ ರಾಮ್ ಜಾರಿ : ಈಶ್ವರ ಖಂಡ್ರೆ ಹಿಂಡಾಲ್ಕೊ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ : ಕುಟುಂಬದವರು, ಗ್ರಾಮಸ್ಥರಿಂದ ಕಲ್ಲು ತೂರಾಟ ಶ್ರೀಲಂಕಾ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ನಾಳೆಯಿಂದ೨೬ ರಂದು ಭಾರತ-ಐಯರ್ಲೆಂಡ್ ಮೊದಲ ಟ್ವೆಂಟಿ-೨೦ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನ ಬದಲು ಚಿಕತ್ಸೆ ನೀಡುತ್ತಿರುವ ಆತನ ಪತ್ನಿLIC ಹಣದ ಆಸೆಗೆ ತಮ್ಮನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಅಣ್ಣಾ ರಾಜ್ಯದಲ್ಲಿ ಶೀಘ್ರದಲ್ಲೇ ಬೈಕ್ ಆಯಂಬುಲೆನ್ಸ್ ಸೇವೆ ಜಾರಿಗೆ : ಯು. ಟಿ ಖಾದರ್ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ : ಖಾತೆ ಇಲ್ಲದವರಿಗೆ 60 ಕೋಟಿ ರೂ. ಜಮೆ ಅಪ್ರಾಪ್ತರಿಂದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಅಜ್ಜಯ್ಯನ ಪೋಟೋ ಇರಿಸಿ ಗೃಹ ಕಚೇರಿಯಲ್ಲಿ ಸಿಎಂ ವಿಶೇಷ ಪೂಜೆ