Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀರಾವರಿ ಯೋಜನೆಗೆ ಸರ್ಕಾರದ ಆದ್ಯತೆ, ನಮ್ಮನೀರು ನಮ್ಮ ಹಕ್ಕು ಹೋರಾಟ: ಡಿ.ಕೆ.ಶಿವಕುಮಾರ

Advertisement
ಜಮಖಂಡಿ:ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟವನ್ನು ಪ್ರಾರಂಭಿಸಲಿದೆ ಎಂದು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ನಗರದಲ್ಲಿ ನೂತನ ಅರ್ಬನ್ ಬ್ಯಾಂಕ್‌ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಠಾನ ಗೊಳಿಸಲು ಸರ್ಕಾರ ಬದ್ಧವಾಗಿದೆ. ೫೨೪ ಮೀಟರ್ ನೀರು ಹಿಡಿದಿಟ್ಟುಕೊಳ್ಳಲು ಗೆಜೆಟ್ ನೋಟಿಫೀಕೇಷನ್ ಆಗಿಲ್ಲ ಆದ್ದರಿಂದ ಯೋಜನೆ ವಿಳಂಬವಾಗಿದೆ. ಗೆಜೆಟ್‌ನೋಟಿಫಿಕೇಷನ್ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡು ರೈತರ ಬದುಕನ್ನು ಹಸನಾಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.



ನೀರು ಸಮುದ್ರದ ಪಾಲಾಗಬಾರದು ಎಂಬ ಉದ್ದೇಶದಿಂದ ನೀರಾವರಿ ಇಲಾಖೆಗೆ ೨೨ ಸಾವರಿ ಕೋಟಿರೂಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವದು, ಏತ ನೀರಾವರಿ ಯೋಜನೆಗಳಿಗೆ ೨೧೬ ಕೋಟಿರೂ.ಗಳನ್ನು ನೀಡಲಾಗಿದೆ. ವೆಂಕಟೇಶ್ವರ ಏತನೀರಾವರಿ,

ಮುಳವಾಡ ಏತನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಅಥಣಿ ತಾಲೂಕಿನಲ್ಲಿ ೧೪೮೦ ಕೋಟಿ ರೂ.ಗಳ ಏತನೀರಾವರಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು ೯೯೫೦ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ತಾಲುಕಿನ ಹಿಪ್ಪರಗಿ ಸೇತುವೆ ಕಾಮಗಾರಿ ನಡೆದಿದ್ದು ೬೦ ಕೋಟಿ.ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

ದೊಡ್ಡಬಜೆಟ್- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೪ಲಕ್ಷ ಕೋಟಿರೂಗಳ ದಾಖಲೆ ಬಜೆಟ್ ನೀಡಿದ್ದು, ಇತಿಹಾಸ ಸೃಷ್ಠಿಯಾಗಿದೆ. ಎಲ್ಲರಿಗೂ ಸಮಬಾಳು ಸಮಪಾಲು ಎನ್ನುವ ಸಹಕಾರಿ ತತ್ವದ ಮೇಲೆ ಪಕ್ಷ ಆಡಳಿತ ನಡೆಸುತ್ತಿದೆ.

ಗ್ಯಾರಂಟಿ ಯೋಜನೆ - ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ೫೨ ಸಾವಿರಕೋಟಿ ಕರ್ಚು ಮಾಡುತ್ತಿದ್ದೇವೆ. ಇದರಿಂದ ರಾಜ್ಯದ ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ಅನೇಕರ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಬದುಕಿಗೆ ಸಹಾಯವಾಗಿದೆ. ೨೦ ಸಾವಿರರೂಳ ಆದಾಯವನ್ನು ಮಹಿಳೆಯರು ರೊಟ್ಟಿ ಮಾರಾಟ ಮಾಡಿಗಳಿಸುತ್ತಿದ್ದಾರೆ. ೧.೨೨ ಲಕ್ಷ ಮಹಿಳೆಯ ಬದುಕು ಬದಲಾವಣೆಯಾಗಿದೆ ಎಂದು ಹೇಳಿದರು.

ನಂದಿನಿಹಾಲು- ರಾಜ್ಯದ ರೈತರ ಉತ್ಪಾದನೆಯ ನಂದಿನಿ ಹಾಲು ರಾಷ್ಟç ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶೇ.೯೦ರಷ್ಟು ಹಾಲನ್ನು ಸಹಕಾರ ಸಂಘಗಳಿAದ ಹಂಚಿಕೆ ಮಾಡಲಾಗುತ್ತಿದ್ದು ರೈತ ವರ್ಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲಾಗಿದೆ ಎಂದರು.

ರೇಶ್ಮೆ ಬೆಳೆಯಿರಿ- ರೇಶ್ಮೆ ಬೆಳೆದು ಹೆಚ್ಚು ಆದಾಯ ಗಳಿಸಬಹುದಾಗಿದ್ದು ರೈತರು ರೇಶ್ಮೆ ಬೆಳೆಯಲು ಮುಂದಾಗಬೇಕು, ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಲಿದೆ ಎಂದು ತಿಳಿಸಿದರು.

ಮತ್ತೆ ಅಧಿಕಾರಕ್ಕೆ- ೨೦೨೮ ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉತ್ತರಕರ್ನಾಟಕದ ಜನ ಹೃದಯ ಶ್ರೀಮಂತರು. ಮಾಜಿ ಶಾಸಕರಾದ ದಿ.ರಾಮಣ್ಣ ಕಲೂತಿ, ದಿ.ಸಿದ್ಧು ನ್ಯಾಮಗೌಡರು ಬಹಳ ಆತ್ಮೀಯರಾಗಿದ್ದರು. ಅವರೊಂದಿಗೆ ಉತ್ತಮವಾದ ವಡನಾಟವಿತ್ತು, ಸಹಕಾರ ಸಚಿವ ನಾಗಿದ್ದಾಗ ಹಾಗೂ ಜಮಖಂಡಿ ಶುಗರ್ಸ ಕಾರ್ಖಾನೆಯ ಉದ್ಘಾನೆಗೆ ಬಂದಿದ್ದು ನೆನಪಿ ಎಂದು ಹೇಳಿದರು.

ವರದಿ :ಬಂದೇನವಾಜ ನದಾಫ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ