ಚಿಕ್ಕೋಡಿ:ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸ್ಮಶಾನವೊಂದು ಜಲಾವೃತವಾದಂತಹ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.ಕೃಷ್ಣಾ ನದಿಗೆ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ.ಸದ್ಯ ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಭೀತಿ ಆವರಿಸಿದೆ.ಇದರ ನಡುವೆ ಕೃಷ್ಣಾ ನದಿಯ ದಡದ ಮೇಲೆ ಇರುವಂತಹ ಸ್ಮಶಾನಕ್ಕೆ ಕೃಷ್ಣಾ ನದಿಯ ನೀರು ಪ್ರವೇಶಿಸಿದ್ದು ಇದರಿಂದ ಸ್ಮಶಾನ ಜಲಾವೃತವಾಗಿದೆ.ಪರಿಣಾಮ ಜನರು ಶವ ಸಂಸ್ಕಾರಕ್ಕಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
[video width="848" height="382" mp4="https://bharathvaibhav.com/wp-content/uploads/2024/07/WhatsApp-Video-2024-07-28-at-5.12.54-PM.mp4"][/video]
ವರದಿ ರಾಜು ಮುಂಡೆ

