Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯರಿಗೆ ವರದಾನವಾದ ಕೈಮಗ್ಗ ಕೆಲಸ

Advertisement
ಧಮತರಿ, ಛತ್ತೀಸ್​​ಗಢ: ಧಮತರಿಯ ಬಿಜನಪುರಿ ಗ್ರಾಮದ ಮಹಿಳೆಯರು ಪ್ರತಿ ವರ್ಷವೂ ಕೆಲವು ತಿಂಗಳು ಕೃಷಿಯನ್ನೇ ಅವಲಂಬಿಸಬೇಕಾಗುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಇವರಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಪಕ್ಕದ ರಾಜ್ಯ ಒಡಿಶಾದಿಂದ ಬಂದ ಬದಲಾವಣೆಯ ಗಾಳಿಯಿಂದಾಗಿ ಕೈಮಗ್ಗದ ಕ್ರಾಂತಿಯುಂಟಾಗಿದೆ. ಈ ಕೈಮಗ್ಗದ ಕ್ರಾಂತಿ ನಮ್ಮ ಬದುಕನ್ನೇ ಬದಲಿಸುತ್ತದೆ ಎಂಬುದು ಇವರಿಗೆ ಗೊತ್ತೇ ಇರಲಿಲ್ಲ.

2018 ರಲ್ಲಿ ಬಿಜನಪುರಿ ನೇಕಾರರ ಸಹಕಾರ ಸಂಘ ಲಿಮಿಟೆಡ್ ಸ್ಥಾಪನೆ ಮಾಡಲಾಯಿತು. ಕೇವಲ 24 ಕೆಲಸಗಾರರಿಂದ ಹುಟ್ಟಿಕೊಂಡಿದ್ದ ಸಂಘ ಈಗ 230 ಹೆಚ್ಚು ನೇಕಾರರನ್ನು ಹೊಂದಿದೆ. ಈ ಸಹಕಾರಿ ಸಂಘದಲ್ಲಿ ಮಹಿಳೆಯರಿಗೆ ಸಂಬಲ್ಪುರಿ ಸೀರೆಗಳನ್ನು ನೇಯ್ಗೆ ಮಾಡುವ ತರಬೇತಿ ನೀಡಿ, ಕೆಲಸಕ್ಕೆ ಅಣಿಗೊಳಿಲಾಗಿತ್ತು.



ಈ ಸೀರೆಗೆ ಭಾರಿ ಬೇಡಿಕೆ ಇರುವುದರಿಂದ ಒಡಿಶಾದ ಸಂಬಲ್ಪುರದಲ್ಲಿ ನೇಕಾರರಿಗೆ ಜೀವನೋಪಾಯದ ಮುಖ್ಯ ಸಾಧನವೂ ಆಗಿದೆ. ಹೀಗೆ ಆರಂಭವಾದ ತರಬೇತಿ ಅಲ್ಲಿನ ಮಹಿಳೆಯರಿಗೆ ಕೆಲಸ ನೀಡಿತು. ಪ್ರತಿ ಸೀರೆಗೆ ರೂ 300- ರೂ 350 ಗಳಿಸಲು ಈ ತರಬೇತಿ ಸಹಾಯ ಮಾಡಿದೆ. ಕೆಲವರು ತಿಂಗಳಿಗೆ ರೂ 10,000-ರೂ 12,000 ಆದಾಯವನ್ನೂ ಗಳಿಸುತ್ತಿದ್ದಾರೆ.

ಇಂದು ಈ ಸಂಘದಲ್ಲಿ 230 ಕುಶಲಕರ್ಮಿಗಳಿದ್ದಾರೆ. ಇದರಲ್ಲಿ 180 ಮಹಿಳೆಯರು ಸೀರೆಗಳನ್ನು ಮಾತ್ರವಲ್ಲದೇ ಶಾಲಾ ಸಮವಸ್ತ್ರಗಳು, ಆಸ್ಪತ್ರೆಯ ಬೆಡ್‌ಶೀಟ್‌ಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಬಟ್ಟೆಗಳನ್ನು ಸಹ ತಯಾರಿಸಿ, ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಸ್ವಯಂ ಉದ್ಯೋಗದ ಬಗ್ಗೆ ಸೊಸೈಟಿಯ ವ್ಯವಸ್ಥಾಪಕರ ಪ್ರತಿಕ್ರಿಯೆನಾಲ್ಕು ತಿಂಗಳು ಮಾತ್ರ ದುಡಿಯುತ್ತಿದ್ದ ಮಹಿಳೆಯರು ಈಗ ವರ್ಷವಿಡೀ ದುಡಿಯುತ್ತಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿಯ ನಂತರ ಇವರೆಲ್ಲ 1000 ದಿಂದ 1200 ರೂವರೆಗೂ ಗಳಿಕೆ ಮಾಡುತ್ತಿದ್ದಾರೆ ಎಂದು ಸೊಸೈಟಿಯ ವ್ಯವಸ್ಥಾಪಕ ಅವಧಾರಂ ದೇವಾಂಗಣ್ಣ ಹೇಳಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ