ಸಿಂಧನೂರು : ನಗರದಲ್ಲಿ ರಸ್ತೆ ಸುರಕ್ಷತೆಗಾಗಿ ನಗರ ಪೊಲೀಸ್ ಇಲಾಖೆಯ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮಟ್ ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ನಗರದ ಗಾಂಧಿ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಯಿತು ಎಂದು ಡಿವೈಎಸ್ಪಿ ಚಂದ್ರಶೇಖರ ಜಿ, ತಿಳಿಸಿದರು.
ನಂತರ ಅವರು ಮಾತನಾಡಿ ಹೆಲ್ಮೆಟ್ ಧರಿಸುವುದು ಕೇವಲ ಪೊಲೀಸರ ಭಯಕಲ್ಲ ಕುಟುಂಬದ ರಕ್ಷಣೆಗೆ ದಂಡ ವಿಧಿಸುವ ಬದಲು ಬೈಕ್ ಸವಾರರಲ್ಲಿ ಸುರಕ್ಷತೆಯ ಅರಿವು ಮೂಡಿಸಲು ಇಂತಹ ಅಭಿಯಾನವು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮಟ್ ವಿತರಣೆ ಮತ್ತು ಕಾನೂನು ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಯಿತು ಎಂದರು.
ಈ ಸಂದರ್ಭದಲ್ಲಿ: ಡಿವೈಎಸ್ಪಿ ಚಂದ್ರಶೇಖರ್ ಜಿ,ಪಿ ಐ,ವೀರಾರೆಡ್ಡಿ, ಬಳಗನೂರು ಪೊಲೀಸ್ ಠಾಣೆಯ ಪಿಎಸ್ಐ ಎರಿಯಪ್ಪ, ರಾಮಣ್ಣ ಪೊಲೀಸ್ ಜಗದೀಶ್ ಪೊಲೀಸ್ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿಗಳು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ,


