Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡ ಕೂಲಿ ಕಾರ್ಮಿಕ ಗೆ ₹22,86,014 ಪಾವತಿಸುವಂತೆ ಜಿಎಸ್‌ಟಿ ನೋಟಿಸ್ ಜಾರಿ

Advertisement
ಭದ್ರಾದ್ರಿ ಕೊತಗುಡೆಂ (ತೆಲಂಗಾಣ) : ಇಲ್ಲಿನ ಚಂದ್ರುಗೊಂಡ ಮಂಡಲದ ಬಡ ಕೂಲಿ ಕಾರ್ಮಿಕ ಜನಪತಿ ವೆಂಕಟೇಶ್ವರಲು ಎಂಬುವವರಿಗೆ ₹22,86,014 ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಟಿಸ್ ಜಾರಿ ಮಾಡಲಾಗಿದೆ.

ವಿಜಯವಾಡದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯ ಸಹಾಯಕ ಆಯುಕ್ತರು ಈ ನೋಟಿಸ್​ ನೀಡಿದ್ದು, ವೆಂಕಟೇಶ್ವರಲು ಅವರು 2022ರಲ್ಲಿ "ಭಾಗ್ಯಲಕ್ಷ್ಮಿ ಎಂಟರ್‌ಪ್ರೈಸಸ್" ಹೆಸರಿನಲ್ಲಿ ₹1 ಕೋಟಿ ಮೌಲ್ಯದ ಗ್ರಾನೈಟ್ ವ್ಯವಹಾರ ನಡೆಸಿದ್ದರು ಮತ್ತು ಇದಕ್ಕೆ ಅನ್ವಯವಾಗುವ ಜಿಎಸ್‌ಟಿ ಪಾವತಿಸಲು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ದಿನನಿತ್ಯದ ಕೂಲಿ ಹಣದಲ್ಲಿ ಬದುಕುತ್ತಿರುವ ವೆಂಕಟೇಶ್ವರಲು ಅವರು ಅಂತಹ ಯಾವುದೇ ವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ತಿಂಗಳ 4ರಂದು ನೋಟಿಸ್ ಬಂದ ನಂತರ ದಾಖಲೆಯಲ್ಲಿ ನಮೂದಿಸಿರುವ ವಿಜಯವಾಡ ವಿಳಾಸಕ್ಕೆ ಖುದ್ದು ಭೇಟಿ ನೀಡಿ, ಸ್ಥಳದಲ್ಲಿ ಅಂತಹ ಯಾವುದೇ ಕಂಪನಿ ಅಸ್ತಿತ್ವದಲ್ಲಿಲ್ಲ ಎಂಬುದನ್ನ ಕಂಡುಕೊಂಡಿದ್ದಾರೆ.

ಗುರುತಿನ ಚೀಟಿ ದುರುಪಯೋಗದ ಶಂಕೆ : ಯಾರೋ ತಮ್ಮ ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ವಂಚನೆಯಿಂದ ಪಾನ್ ಕಾರ್ಡ್ ಪಡೆದು, ತಮ್ಮ ಹೆಸರಿನಲ್ಲಿ ವ್ಯವಹಾರವನ್ನು ನೋಂದಾಯಿಸಿದ್ದಾರೆ ಎಂದು ವೆಂಕಟೇಶ್ವರಲು ಶಂಕಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಅವರು 2022 ರಲ್ಲಿ ಪ್ಯಾನ್ ಕಾರ್ಡ್ ಸಹ ಹೊಂದಿರಲಿಲ್ಲ. ಆರು ತಿಂಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಒತ್ತಾಯಿಸಿದ ಕಾರ್ಮಿಕ: ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿರುವ ಕಾರ್ಮಿಕ ಭಾರಿ ತೆರಿಗೆ ಪಾವತಿ ನೋಟಿಸ್​​ಗೆ ಕಂಗೆಟ್ಟಿದ್ದಾರೆ. "ನನಗೆ ಗೊತ್ತಿಲ್ಲದೆ ನನ್ನ ಹೆಸರಿನಲ್ಲಿ ವ್ಯಾಪಾರ ಪರವಾನಗಿಯನ್ನು ಹೇಗೆ ನೀಡಲಾಯಿತು?" ಎಂದು ಪ್ರಶ್ನಿಸಿರುವ ಅವರು, ವಂಚನೆಯ ಬಗ್ಗೆ ತನಿಖೆ ನಡೆಸಿ ತನಗೆ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ