ಹಾಸನ: ಕೋಡಿಮಠದ ಶ್ರೀಗಳು ನೇಪಾಳದಂತೆ ದಕ್ಷಿಣ ಭಾರತದಲ್ಲೂ ಪ್ರವಾಹದಂತಹ ಭೀಕರ ಘಟನೆಗಳು ನಡೆಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಮುದ್ರಗಳು ನುಗ್ಗಿ ಊರುಗಳು ಮುಳುಗುವ ಎಚ್ಚರಿಕೆ ನೀಡಿದ ಅವರು, ಹಿಂಗಾರು ಮಳೆ ಸಮೃದ್ಧವಾಗಿ ರೈತರಿಗೆ ಪರಿಹಾರ ಸಿಗಲಿದೆ ಎಂದೂ ತಿಳಿಸಿದ್ದಾರೆ.
ಹಾಸನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (ಕೋಡಿಶ್ರೀ), ಈ ವರ್ಷದ ಭವಿಷ್ಯವನ್ನು ನಾನು ಮೊದಲೇ ಹೇಳಿದ್ದೆ.ಮುಂಗಾರು ಮಳೆ ವಿರಳ, ಹಿಂಗಾರು ಮಳೆ ಆಗುತ್ತದೆ.
ಜನ ಜಂಗುಳಿಯಾಗುತ್ತದೆ, ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ. ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತವಾದ ಪ್ರವಾಹ ಆಗುತ್ತೆ ಅಂಥ ಹೇಳಿದ್ದೆ, ಈಗ ಅದು ನಡೆಯುತ್ತಿದೆ. ಈಗ ಇಲ್ಲಿಂದ ಕಷ್ಟ ಮುಂದುವರೆಯುತ್ತೆ. ಆದರೂ ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ ಎಂದಿದ್ದಾರೆ.
ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಇದೀಗ ಹಿಂಗಾರು ಸಮೃದ್ದಿಯಾಗುತ್ತದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ. ಕೆರೆ, ಕಟ್ಟೆಗಳು ತುಂಬುತ್ತವೆ, ಅದರ ಬಗ್ಗೆ ತೊಂದರೆಯಿಲ್ಲ. ಹಿಂಗಾರು ಮಳೆ ಸಮೃದ್ದಿಯಾಗುತ್ತದೆ. ಹಿಂಗಾರು ಮಳೆ ಆಗುತ್ತೆ, ಶೇಕಡಾ 90 ಜನರಿಗೆ ಪರಿಹಾರ ಸಿಗುತ್ತೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಉತ್ತರ ಭಾರತದ ನೇಪಾಳದಲ್ಲಿ ನಡೆದ ಘಟನೆಯಂತೆ ದಕ್ಷಿಣ ಭಾತರದಲ್ಲೂ ಆಗುವ ಲಕ್ಷಣ ಇದೆ. ಸಾವು-ನೋವು, ದುಃಖ, ಊರುಗಳು ಕೊಚ್ಚಿ ಹೋಗುವ ಘಟನೆಗಳು ಇವೆ.
ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಎರಡ್ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ದೇಶಗಳು ಮುಳುಗುತ್ತವೆ, ವಿಪರೀತವಾದ ನೀರು, ಜನಜಂಗುಳಿ, ಯುದ್ಧವಾಗುತ್ತದೆ.
ಜನನಿಯಂತ್ರಣ ತಪ್ತಾರೆ. ಆಳುವವರು ಅತೃಪ್ತರಾಗುತ್ತಾರೆ.ದಿನ ಕ್ರಮೇಣ ಪ್ರಕೃತಿ ವಿರೋಧವಾಗಿದ್ದರಿಂದ ನೀರು ಸಿಗಲಿಲ್ಲ. ಜಗತ್ತಿನಾದ್ಯಾಂತ ಮಿಲಿಯನ್‌ಗಟ್ಟಲೆ ಬೋರ್‌ವೆಲ್‌ಗಳನ್ನು ಕೊರೆದರು.
ಬಂಡೆ ಮೇಲೆ ಭೂಮಿ ನಿಂತಿರುವುದು. ಅದರಿಂದ ಬೇಸ್‌ಮೆಂಟ್ ಲೂಸ್ ಆಯಿತು. ಇದರಿಂದ ಪ್ರವಾಹ, ಭೂಮಿ ಕಂಪನ ಜಾಸ್ತಿಯಾಯಿತು ಎಂದಿದ್ದಾರೆ.


