
ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಗಂಗಾವತಿ ನಗರಾದ್ಯಂತ ಹಲವಾರು ವರ್ಷಗಳಿಂದ ಪ್ರತಿ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು. ಇದರಿಂದ ರಸ್ತೆ ಸವಾರರಿಗೆ,ಸಂಚಾರಿಗಳಿಗೆ, ಶಾಲಾ ಮಕ್ಕಳಿಗೆ,ಹಿರಿಯರಿಗೆ,ಪಾದಚಾರಿಗಳಿಗೆ ಅನಾನುಕೂಲ ಸೃಷ್ಟಿಯಾಗಿದ್ದು ನಗರದ ಸಾರ್ವಜನಿಕರ ಮೂಲಭೂತ ಸೇವೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಗರಸಭೆ ಆಡಳಿತಾಧಿಕಾರಿಗಳು,ಜನ ಪ್ರತಿನಿಧಿಗಳು ಸಂಪೂರ್ವಾಗಿ ವಿಫಲವಾಗಿದ್ದಾರೆ. ಇದರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ತಗ್ಗು ಗುಂಡಿಗಳನ್ನು ಮುಚ್ಚುವ ವಿಶೇಷವಾದ ಹೋರಾಟ ಅಭಿಯಾನ ಗಳನ್ನು ಹಮ್ಮಿಕೊಂಡಿದ್ದು ಅದರ ಭಾಗವಾಗಿ ಗಂಗಾವತಿ ನಗರದಲ್ಲಿ ಕೂಡ ರಸ್ತೆಯ ಗುಂಡಿಗಳಿಗೆ ಹೂ ಚೆಲ್ಲಿ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು ಎಂದು ತಿಳಿಸಿದರು.
https://youtu.be/e3AQSwEzZU8
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಣೇಶ್ ಅಮೃತ್, ಮೈನುದ್ದೀನ್, ಗಣೇಶ್ ಸಾರಂಗಿ, ಮೆಹಬೂಬು, ಮಹಮ್ಮದ್ ಹುಸೇನ್, ಕನಕಪ್ಪ ಉಡಿಜಾಲಿ, ವೀರೇಶ್ ಎಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ ;ರಾಜು ಮುಂಡೆ

