Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಚಿಂಗ ಪಡೆಯದೆ IAS ಪಾಸಾದ ಕರದಂಟು ನಾಡಿನ ಯುವಕ: ಗಣ್ಯಾತಿಗಣ್ಯರಿಂದ ಸನ್ಮಾನದ ಸುರಿಮಳೆ

Advertisement
ಗೋಕಾಕ: ಭಾರತದ ಅತ್ಯಂತ ಕಠಿಣವಾದ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಅಂತಾನೆ ಬಿಂಬಿತವಾಗಿರುವ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡೋದು ಸುಲಭದ ಸವಾಲಂತೂ ಅಲ್ಲವೇ ಅಲ್ಲ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಕೊಚಿಂಗ ಪಡೆದು ಈ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯನ್ನು ಸಹ ಬರೆಯುತ್ತಾರೆ. ಎಷ್ಟೋ ಜನ ಪಾಸಾಗದೆ ಸಾಕಪ್ಪ ಅಂತ ಹಿಂದೆ ಸರಿದವರು ಉಂಟು,

ಡಿಗ್ರಿ ಮುಗಿದ ನಂತರ ಆರ್ಮಿಯಲ್ಲಿ ಲೆಪ್ಟಿನೆಂಟ ಹುದ್ದೆ ಬಂದರು ನಿರಾಕರಿಸಿ ಎನೆ ಆಗಲಿ ನಾನು ನನ್ನ ತಂದೆ ತಾಯಿ ಕನಸು ನನಸು ಮಾಡಬೇಕೆಂಬ ಚಲದಿಂದ ಒಂದಲ್ಲ ಎರಡಲ್ಲ ಸತತ ನಾಲ್ಕು ಬಾರಿ ಪ್ರಯತ್ನ ಪಟ್ಟು ಕೊನೆಗೆ ಐದನೆ ಬಾರಿಗೆ ಕರದಂಟು ನಾಡಿನ ಯುವಕ ಸಂಜಯ ಶಶಿಕಾಂತ ಕೌಜಲಗಿ ಇವರು 690 ನೆ ರ್ಯಾಂಕ ಪಡೆದು ತಂದೆ ತಾಯಿ ಗೌರವ ಹೆಚ್ವಿಸಿ ಗೋಕಾಕ,ಮೂಡಲಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.



ತಮ್ಮ ಮಗ IAS ಪಾಸಾಗಿ ಗೋಕಾಕಕ್ಕೆ ಆಗಮಿಸುತಿದ್ದಂತೆ ಸಂಜಯ ತಾಯಿ ಜಯಶ್ರೀ ಯವರು ತಮ್ಮ ಬಂದು ಬಳಗದ ಜೊತೆಯಲ್ಲಿ ಆರತಿ ಎತ್ತಿ ಸಿಹಿ ತಿನ್ನಿಸುವುದರ ಮೂಲಕ ಪುತ್ರ ಸಂಜಯ ಇವರನ್ನು ಆತ್ಮಿಯವಾಗಿ ಬರಮಾಡಿಕೊಂಡು ಸತತ ಪ್ರಯತ್ನ ಮಾಡುತ್ತಿರಬೇಕು,ಸದಾ ಜಾಗೃತರಾಗಿರಬೇಕು ಅಂದಾಗ ಮಾತ್ರ ಯಶಸ್ಸು ಖಂಡಿತ ಅದಕ್ಕೆ ನನ್ನ ಮಗ ಸಂಜಯ ಸಾಕ್ಷಿ ಎಂದು ಹೆಮ್ಮೆಯಿಂದ ಹೇಳಿದರು.

ಸುದ್ದಿ ತಿಳಿದ ಗೋಕಾಕ ,ಮೂಡಲಗಿಯ ಬಿಇಓಗಳು ಅರಭಾಂವಿ ಶಾಸಕರ ಆಪ್ತಸಹಾಯಕರು,ಗೋಕಾಕ ಶಾಸಕರ ಆಪ್ತಸಹಾಯಕರು ಗೋಕಾಕ ನಾಡಿಗೆ ಕೀರ್ತಿ ತಂದಿರುವ ಸಂಜಯ ಇತನಿಗೆ ಸಿಹಿ ತಿನಿಸಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.

ಇನ್ನು IAS ಪಾಸಾದ ಸಂಜಯ ಕೌಜಲಗಿಯವರು ಮಾದ್ಯಮದವರ ಜೊತೆ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಬಡಜನರಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತಹ ಅಧಿಕಾರಿಯಾಗಿ ಕೆಲಸ ಮಾಡುತ್ತೇನೆ,ಶೃದ್ದೆ ಭಕ್ತಿಯಿಂದ ಕಾರ್ಯನಿರ್ವಹಿಸಿ ತಂದೆ ತಾಯಿಯ ಗೌರವವನ್ನು ಹೆಚ್ಚಿಸುತ್ತೆನೆಂದರು.

[video width="1280" height="720" mp4="https://bharathvaibhav.com/wp-content/uploads/2025/04/WhatsApp-Video-2025-04-25-at-3.59.02-PM.mp4"][/video]

ಅದರ ಜೊತೆಯಲ್ಲಿ ಎರಡು ಬಾರಿ ಪೇಲಾದರೂ ಸಹ ನನ್ನ ತಾಯಿಯು ನನಗೆ ನೀಡಿದ ದೈರ್ಯ ಮತ್ತು ಚಿಕ್ಕ ವಯಸ್ಸಿನಲ್ಲಿಯೆ ನನ್ನ ತಂದೆ ತಾಯಿಯ ಪ್ರೇರಣೆಯಿಂದ ಇವತ್ತು IAS ಪಾಸಾಗಿದ್ದೇನೆಂದು ಸಂತೋಷ ವ್ಯಕ್ತಪಡಿಸಿದರು.

ಈಗಿನ ಯುವಕರು ಒಂದು ಕನಸನ್ನು ಇಟ್ಟುಕೊಳ್ಳಬೇಕು,ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು,ಮಾಡುವ ಕೆಲಸದ ಬಗ್ಗೆ ಶೃದ್ದೆ ಇದ್ದರೆ ಪ್ರತಿಫಲ ಸಿಕ್ಕೆ ಸಿಗುತ್ತೆ ಎಂದರು.

ಇನ್ನು ಸನ್ಮಾನಿಸಲು ಆಗಮಿಸಿದ್ದ ಗೋಕಾಕ ಬಿಇಓ ಜಿ,ಬಿ,ಬಳಗಾರ ಇವರು ಭಾರತದ ಗೋಕಾಕ ನಾಡಿಗೆ ಹೆಮ್ಮೆಯ ವಿಷಯ, ಯುಪಿಎಸ್,ಸಿ, ಪರೀಕ್ಷೆ ಪಾಸಾಗುವ ಮೂಲಕ ಗ್ರಾಮಿಣ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.ಅದರ ಜೊತೆಯಲ್ಲಿ ಈಗಿನ ಯುವಕರು ಸಂಜಯ ಕೌಜಲಗಿಯವರನ್ನು ಮಾರ್ಗದರ್ಶಿಯಾಗಿಟ್ಟುಕೊಂಡು ಪಾಲಕರಿಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.

ಇನ್ನು ಈ ಸಂದರ್ಭದಲ್ಲಿ ಪುಂಡಲೀಕ ಕಂಬಳಿ,ಕಮಾಂಡರ ವಿಜಯ ಕಂಬಳಿ,ರಮೇಶ ಮುರಗುಂಡಿ ,ಮೂಡಲಗಿ ಸಿಪಿಆಯ್ ಶ್ರೀಶೈಲ ಬ್ಯಾಕೂಡ, ಸೇರಿದಂತೆ ನೂರಾರು ಜನ ಶುಭ ಹಾರೈಸಿದರು.

ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ