ಬೆಂಗಳೂರು : ನಗರದ ಕನ್ನಡ ಭವನ ರವೀಂದ್ರ ಕಲಾಕ್ಷೇತ್ರ ನಲ್ಲಿ ಸೋಮವಾರ ನಡೆದ ಭವ್ಯ ಸಮಾರಂಭದಲ್ಲಿ ಕಲ್ಬುರ್ಗಿಯ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಯುವ ಘಟಕದ ಅಧ್ಯಕ್ಷರಾದ ಎನ್ ಕೆ ಅರ್ಜುನ ಅವರಿಗೆ ಪ್ರತಿಷ್ಠಿತ “ಸಂಘಟನಾ ರತ್ನ ರಾಷ್ಟ್ರ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಬೆಂಗಳೂರು ಸಾಹಿತ್ಯ ಸಂಭ್ರಮ 2026 ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಸಮಾಜಮುಖಿ ಕಾರ್ಯಗಳು, ಯುವಕರ ಸಂಘಟನೆ, ಅಂಬೇಡ್ಕರ್ ಚಿಂತನೆಗಳ ಪ್ರಚಾರ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಎನ್.ಕೆ. ಅರ್ಜುನ ಅವರಿಗೆ ಈ ಗೌರವ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಮಾಜ ಸೇವಕರು ಭಾಗವಹಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ವಿಜಯ್ ಸಿನಿ ಟ್ಯಾಕ್ಸ್ ಕನ್ನಡ ಶ್ರೀ ಶುಭ ಗುರು ಟ್ರಸ್ಟ್ ಹಾಗೂ ಕರ್ನಾಟಕ ಐಕನ್ ಟ್ಯಾಲೆಂಟ್ ಅಚಿವರ್ಸ್ ಅವಾರ್ಡ್ಸ್ 2026 ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ “ಅಪ್ಪು ಯೂತ್ ಐಕಾನ್ ಅವಾರ್ಡ್ಸ್ 2026” ಪ್ರಶಸ್ತಿಯನ್ನೂ ಎನ್.ಕೆ. ಅರ್ಜುನ ಅವರಿಗೆ ನೀಡಿ ಗೌರವಿಸಲಾಯಿತು.
ಇದೆ ವೇಳೆ :ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ, ಕಲಬುರಗಿ ಜಿಲ್ಲಾಧ್ಯಕ್ಷ ಬುದ್ದೇಶ್ ಹಾಗೂ ಉಪಾಧ್ಯಕ್ಷ ಶಿವರುದ್ರ ಅವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವರದಿ : ಹಣಮಂತ ಕುಡಹಳ್ಳಿ

