ಬೆಲ್‌ಪಾಸ್ಟ್(ಐಯರ್ಲೆAಡ್): ಕೆಲವು ಘಂಟೆಗಳವರೆಗೆ ಮುಂದೂಡಲ್ಪಟ್ಟ ಭಾರತ ಹಾಗೂ ಐಯರ್ಲೆಂಡ್ ನಡುವಿನ ಮೊದಲ ಟ್ವೆಂಟಿ-೨೦ ಪಂದ್ಯ ಇಂದು ನಡೆಯಲಿದೆ. ದಾಖಲೆಗಳ ವೀರ ವೈಭವ್ ಸೂರ್ಯವಂಶಿ ಮತ್ತೊಂದು ವಿನೂತನ ದಾಖಲೆಗೆ ಸಜ್ಜಾಗಿದ್ದಾರೆ.
ಇಲ್ಲಿನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಪಂದ್ಯ ಇಂದು ಭಾರತೀಯ ಕಾಲಮಾನ ಸಾಯಂಕಾಲ ೬ ಗಂಟೆಗೆ ನಡೆಯಲಿದೆ. ವೈಭವ್ ಸೂರ್ಯವಂಶಿ ಇಂದು ತಮ್ಮ ಚೊಚ್ಚಲ ಪಂದ್ಯ ಆಡಿದರೆ, ನೂತನ ದಾಖಲೆ ಬರೆಯಲಿದ್ದಾರೆ. ಇದಕ್ಕೆ ಮುನ್ನ ಸಚಿನ್ ತೆಂಡೂಲ್ಕರ್ ಪಾಕಿಸ್ತಾನ್ ವಿರುದ್ಧ ೧೯೮೯ ರಲ್ಲಿ ಪಾಕಿಸ್ತಾನ್ ವಿರುದ್ಧ ಮೊದಲ ಅಂತಾರಾಷ್ಟಿçÃಯ ಪಂದ್ಯ ಆಡಿದಾಗ ಅವರಿಗೆ ೧೬ ವರ್ಷ ಹಾಗೂ ೨೦೫ ದಿನ.
ವೈಭವ್ ಸೂರ್ಯವಂಶಿ ಇಂದು ತಮ್ಮ ಮೊದಲ ಪಂದ್ಯ ಆಡಿದರೆ ಅವರು ೧೫ ವರ್ಷ ೭೧ ದಿನದಲ್ಲಿ ಅಂತಾರಾಷ್ಟಿçÃಯ ಪಂದ್ಯ ಆಡಿದ ಖ್ಯಾತಿಗೆ ಪಾತ್ರರಾಗುವರು. ಇದರೊಂದಿಗೆ ಅವರು ೩೬ ವರ್ಷಗಳಷ್ಟು ಹಳೆಯದಾದ ಸಚಿನ್ ದಾಖಲೆಯನ್ನು ಅಳಿಸುವರು. ತಮ್ಮ ಹೆಸರಿನಲ್ಲಿ ನೂತನ ದಾಖಲೆಯನ್ನು ಬರೆಯಿಸಿಕೊಳ್ಳುವರು.


