ರಾಜ್ಯದಲ್ಲಿ ಸದ್ಯ 16 ಸಕ್ರಿಯ ಕೊರೊನಾ ಪ್ರಕರನಗಳು ಪತ್ತೆಯಾಗಿದ್ದು, ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ ರಾಜ್ಯದಲ್ಲಿ ಸಕ್ರಿಯವಾಗಿರುವ 16 ಪ್ರಕರಣಗಳಲ್ಲೂ ಎಲ್ಲರೂ ಮನೆಯಲ್ಲೇ ಸ್ವಯಂ ನಿಗಾದಲ್ಲಿ ಇದ್ದಾರೆ.
ಯಾರಿಗೂ ತೀವ್ರ ರೋಗ ಲಕ್ಷಣಗಳು ಇಲ್ಲ . ಯಾರೊಬ್ಬರೂ ಆಸ್ಪತ್ರೆಗೆ ದಾಖಲಾಗಿಲ್ಲ . ಹೀಗಾಗಿ ಅನಗತ್ಯ ಆತಂಕ ಬೇಡ . ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ 16 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ . ಹೀಗಾಗಿ ಅನಗತ್ಯವಾಗಿ ಆತಂಕಪಡುವುದುಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

