Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಪೂಜಿ ಪತ್ತಿನ ಸಹಕಾರಿ ಸಂಘದ 80 ನೇ ಶಾಖೆ ಉದ್ಘಾಟನೆ

Advertisement
ಕಂದಗಲ್ಲ : ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟನೆ ಮಾಡುತ್ತಿರುವ
ಕರ್ನಾಟಕ ರಾಜ್ಯದ ಮಾಜಿ ಸಚಿವರು ಹಾಗೂ ಬಾಪೂಜಿ ಪತ್ತಿನ ಸಹಕಾರಿ ಸಂಘದ ಸಂಸ್ತಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲ್ ರವರು ಹಾಗೂ ಶ್ರೀಗಳು ಮತ್ತು ಗಣ್ಯ ಮಾನ್ಯರು.

ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರೂ ಸತತ ಪರಿಶ್ರಮ ಪಟ್ಟರೆ ಸಂಘವನ್ನು ಉನ್ನತ ಮಟ್ಟದಲ್ಲಿ ಕೊಂಡೋಯ್ಯಬಹುದಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು, ಗ್ರಾಮೀಣ ಜನರು ಪಟ್ಟಣಕ್ಕೆ ಹೋಗಿ ತಮ್ಮ ಆರ್ಥಿಕ ಅನುಕೂಲಗಳನ್ನು ಕಲ್ಪಿಸಿಕೊಳ್ಳುವಲ್ಲಿ ಸಾಕಷ್ಟು ಕಷ್ಟ್ ಪಡುತ್ತಿದ್ದು ಅದನ್ನು ತಪ್ಪಿಸಲು ಗ್ರಾಮೀಣ ಭಾಗಗಲ್ಲಿಯೇ ಹೆಚ್ಚೆಚ್ಚು ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯದ ಮಾಜಿ ಸಚಿವರು ಬಾಪೋಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ತಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲ ರವರು ಇಲಕಲ್ಲ ತಾಲೂಕ ಕಂದಗಲ್ಲ ಗ್ರಾಮದ ನಾಡಗೌಡ್ರ್ ಕಾಂಪ್ಲೆಕ್ಸ್ ದಲ್ಲಿ ಪ್ರಾರಂಭಗೊಂಡ ಬಾಪೂಜಿ ಪತ್ತಿನ ಸಹಕಾರಿ ಸಂಘದ 80 ನೇ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನಂದವಾಡಗಿ ಶ್ರೀ ಮಠದ ಕಿರಿಯ ಪೂಜ್ಯರಾದ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸುಕ್ಷೇತ್ರ ಸಜ್ಜಲಗುಡ್ಡ -ಕಂಬಳಿಹಾಳ ಮಠದ ಪೂಜ್ಯ ಶ್ರೀ ದೊಡ್ಡಬಸವಾರ್ಯ ತಾತನವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿ ಕಂದಗಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಮಾತನಾಡಿದರು.
ಮು ಅಥಿತಿಗಳಾದ ಸಿಂಗನಗುತ್ತಿ ಗ್ರಾಮದ ಪರತಗೌಡ್ರ ಪಾಟೀಲ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳದ ಎಸ್ ಸಿ ಮೋಟಗಿ, ಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಜಿ ಸಚಿವರು ಸಂಸ್ಥೆಯ ಸಂಸ್ತಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲ್ ರವರನ್ನು ಗ್ರಾಮದ ವತಿಯಿಂದ ಸ್ಥಳೀಯ ಶಾಖೆಯಿಂದ ಕುರುಪೇಟೆ ಓಣಿ ಹಾಗೂ ಬಸವೇಶ್ವರ ಸಹಕಾರಿ ಸಂಘದಿಂದ್ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಉಭಯ ಶ್ರೀಗಳನ್ನು ಅಧ್ಯಕ್ಷರನ್ನು ಹಾಗೂ ವೇದಿಕೆಯಲ್ಲಿದ್ದ ಎಲ್ಲರನ್ನು ಸನ್ಮಾನಿಸಲಾಯಿತು.

ಗ್ರಾಮದ ಹಿರಿಯರಾದ ಶಶಿಧರ ನಾಡಗೌಡ್ರ, ಮಹಾಂತೇಶ ಕಡಿವಾಲ, ಬಸ್ಸೇಟ್ಟೆಪ್ಪ ಸಜ್ಜನ, ಅಮೀರಹಮಜಾಸಾಹೇಬ ಭಾವಿಕಟ್ಟಿ ಚೌಡೇಶ್ವರಿ ದೇವಸ್ಥಾನದ ಅರ್ಚಕರಾದ ಕೋನಪ್ಪ ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಯುವ ಮುಖಂಡ ಶಿವಪ್ಪ ಭಜಂತ್ರಿ,ಮಾಜಿ ಸೈನಿಕರಾದ ರಾಮನಗೌಡ ಬೆಳ್ಳಿಹಾಳ, ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಅಮಾತೆಪ್ಪ ಯರದಾಳ, ಗ್ರಾಮ ಪಂಚಾಯತ ಸದಸ್ಯ ರೆಹಮಾನಸಾಬ ಬಾಗವಾನ, ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಹವಾಲ್ದಾರ, ಸಂಸ್ತಾಪಕ ಸದಸ್ಯರಾದ ಎಂ ಎಸ್ ಪಾಟೀಲ, ಎ ಎಸ್ ನಾಗಲೋಟಿ, ಸುರೇಶ ತಳವಾರ, ಸ್ಥಳೀಯ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶರಣಪ್ಪಗೌಡ ಸಣ್ಣಅಯ್ಯನಗೌಡ್ರ, ಬಸಪ್ಪ ವಿಟ್ಲಾಪುರ, ಶರಣಯ್ಯ ಮಠ, ವಿರೇಶ ಪಾಟೀಲ್, ಚಂದ್ರಶೇಖರಯ್ಯ್ ಗುರುವಿನಮಠ, ಹಣಮಂತಗೌಡ ದಾದ್ಮಿ, ಚನ್ನಪ್ಪ ಜಾಲಿಹಾಳ, ಶ್ರೀನಿವಾಸ ಕುಲಕರ್ಣಿ,ಗ್ಯಾನಪ್ಪ ಹುತಗಣ್ಣನವರ,ಮಲ್ಲಿಕಾರ್ಜುನ ಪೋತನಾಳ, ಮಂಜುನಾಥ ಪೂಜಾರಿ, ಕಂದಗಲ್ಲ ಶಾಖೆಯ ವ್ಯವಸ್ತಾಪಕರಾದ ಮಹಾಂತೇಶ ಸoದೂರಿ ಹಾಗೂ ಸುತ್ತಮುತ್ತಲಿನ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಲಹಾ ಸಮಿತಿಯ ಪಂಪಣ್ಣ ಸಜ್ಜನ ಸ್ವಾಗತಿಸಿದರು, ಮಹಮ್ಮದಸಾಬ ಭಾವಿಕಟ್ಟಿ ವಂದಿಸಿದರು, ಪತ್ರಕರ್ತ ವಿರೇಶ್ ಶಿಂಪಿ ನಿರೋಪಿಸಿದರು.

ವರದಿ : ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ