
ನಂತರ ಶಾಸಕ ಎಸ್ ಮುನಿರಾಜು ಮಾತನಾಡಿ ಜನರ ಕುಂದುಕೊರತೆಗಳ ಪರಿಹಾರಕ್ಕಾಗಿ ಕಚೇರಿ ಉದ್ಘಾಟನೆ ಮಾಡಲಾಗಿದೆ ಜನರ ಎನೇ ಸಮಸ್ಯೆಗಳು ಇರಲಿ ಸ್ಪಂದಿಸುವ ಕಾರ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅದಲ್ಲದೆ ಈ ಬಿಬಿಎಂಪಿ ಕಚೇರಿಯಲ್ಲಿ ಹೆಗ್ಗನಹಳ್ಳಿ, ರಾಜಗೋಪಾಲನಗರ ವಾರ್ಡಗಳ ಸಂಬಂಧ ಪಟ್ಟ ಅಧಿಕಾರಿಗಳು ಇರುವುದರಿಂದ ಶಾಸಕರ ಕಚೇರಿ ಮಾಡಲಾಗಿದೆ ನಮ್ಮ ಪಕ್ಷದ ಮುಖಂಡರನ್ನು ಸಂಪರ್ಕಿಸಿ ಅಧಿಕಾರಿಗಳಿಂದ ಆಗುವ ಕೆಲಸವನ್ನು ಮಾಡಲಾಗುತ್ತದೆ ಎಂದು ಶಾಸಕ ಎಸ್ ಮುನಿರಾಜು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮಹಿಳಾ ಮುಖ್ಯಸ್ಥೆ ಹಾಗೂ ಶಾಸಕರ ಧರ್ಮ ಪತ್ನಿ ಸುಜಾತಾ ಮುನಿರಾಜು, ಶಾಸಕರ ಅಳಿಯ ಬಿಜೆಪಿ ಯುವ ಮುಖಂಡ , ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಗೂ ಆರ್ ಎಸ್ ಎಸ್ ಪ್ರಮುಖ ರಂಗಸ್ವಾಮಿ, ಡಾ. ನಾಗೇಶ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್

