Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಜೆತನ ಹೆಚ್ಚಳ : ಶೇ. 50 ರಷ್ಟು ಪುರುಷರೂ ಕಾರಣ

Advertisement
ಬೆಂಗಳೂರು: ಕಳೆದೊಂದು ದಶಕದಲ್ಲಿ ಪ್ರಮುಖವಾಗಿ ಯುವಕರಲ್ಲಿ ಬಂಜೆತನ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಶೇ. 40-50 ರಷ್ಟು ಬಂಜೆತನ ಪ್ರಕರಣಗಳು ಪುರುಷರ ಅಂಶಗಳೊಂದಿಗೆ ಸಂಬಂಧ ಹೊಂದಿವೆ ಎಂದು ಸಮಗ್ರ ಬಂಜೆತನದ ಕಾನ್ಕ್ಲೇವ್ (CIC) 2025 ರ ಸಂಘಟನಾ ಅಧ್ಯಕ್ಷ ಡಾ.ಪ್ರವೀಣ್ ಜೋಶಿ ಹೇಳಿದರು.

ಭಾನುವಾರ ಗ್ಲೋಬಲ್ ಹೆಲ್ತ್‌ಕೇರ್ ಅಕಾಡೆಮಿ ನಗರದಲ್ಲಿಆಯೋಜಿಸಿದ್ದ CIC 2025 ರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ದಂಪತಿಗಳಲ್ಲಿ ಬಂಜೆತನವು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವುದರಿಂದ ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಫಲವತ್ತತೆಯ ಆರೈಕೆಯ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಿದ್ದಾರೆ. ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಫಲವತ್ತತೆಯ ಆರೈಕೆಗೆ ಗಮನ ನೀಡಬೇಕು ಎಂದರು.

 ಕಾರಣಗಳು: ನಗರ ಪ್ರದೇಶಗಳಲ್ಲಿ ಬಂಜೆತನದ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಾ. ಜೋಶಿ, ಕಡಿಮೆ ವೀರ್ಯಾಣು ಹಾಗೂ ವೀರ್ಯಗಳ ಕಡಿಮೆ ಚಲನಶೀಲನತೆ, ಹಾರ್ಮೋನುಗಳ ಅಸಮತೋಲನ, ಆನುವಂಶಿಕತೆ, ಧೂಮಪಾನ, ಅತಿಯಾದ ಮದ್ಯಪಾನ, ಸ್ಥೂಲಕಾಯತೆ ಮತ್ತು ಶಾಖ,ವಿಕಿರಣಕ್ಕೆ ಹೆಚ್ಚಿನ ಕಾಲ ಒಡ್ಡಿಕೊಳ್ಳುವುದು ಮುಂತಾದ ಜೀವನಶೈಲಿ ಪುರುಷ ಬಂಜೆತನದ ಹೆಚ್ಚಳಕ್ಕೆ ಕಾರಣವಾಗಿವೆ.ಅಲ್ಲದೇ, ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ವೀರ್ಯದ ಆರೋಗ್ಯ ಕ್ಷೀಣಿಸುವುದಕ್ಕೆ ಸಂಬಂಧಿಸಿದೆ ಎಂದು ಡಾ. ಪ್ರವೀಣ್ ಹೇಳಿದರು.

Advertisements

ರಾಜ್ಯದ ಮಹಿಳೆಯರಲ್ಲಿ ಬಂಜೆತನಸ್ತ್ರೀ ಬಂಜೆತನವನ್ನು ಉದ್ದೇಶಿಸಿ ಮಾತನಾಡಿದ CIC 2025 ರ ಸಂಘಟನಾ ಕಾರ್ಯದರ್ಶಿ ಡಾ.ಮೇಘನಾ ನ್ಯಾಪತಿ, “2019-20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (NFHS-5) ಪ್ರಕಾರ 15-49 ವರ್ಷ ವಯಸ್ಸಿನ ಪ್ರತಿ 1,000 ವಿವಾಹಿತ ಮಹಿಳೆಯರಲ್ಲಿ ಶೇ. 18.7 ರಷ್ಟು ಮಹಿಳೆಯರ ಮೇಲೆ ಬಂಜೆತನ ಪರಿಣಾಮ ಬೀರುತ್ತದೆ. ಗೋವಾ, ಲಕ್ಷದ್ವೀಪ ಮತ್ತು ಛತ್ತೀಸ್‌ಗಢದಂತಹ ಕೆಲವು ಪ್ರದೇಶಗಳು ಇನ್ನೂ ಹೆಚ್ಚಿನ ದರಗಳನ್ನು ಹೊಂದಿವೆ. ಕರ್ನಾಟಕದಲ್ಲಿ ಸುಮಾರು ಶೇ. 5.9 ರಷ್ಟು ವಿವಾಹಿತ ಮಹಿಳೆಯರು ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ (ಶೇ.5.5) ತುಸು ಹೆಚ್ಚು (ಶೇ. 6.1 ರಷ್ಟು) ಮಹಿಳೆಯರು ಬಂಜೆತನ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾ ಮಟ್ಟದ ಗೃಹಿಣಿಯರ ಸರ್ವೆ (DLHS) ತೋರಿಸಿದೆ. ಈ ವ್ಯತ್ಯಾಸಗಳು ವಿವಿಧ ಪ್ರದೇಶಗಳಲ್ಲಿನ ಮಹಿಳೆಯರಿಗೆ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುವ ತುರ್ತು ಅಗತ್ಯವನ್ನು ತೋರಿಸಿವೆ ಎಂದು ಅವರು ಹೇಳಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ