LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾಯಸಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ : ಪಥಸಂಚಲನದಲ್ಲಿ ಸೌರಭ ಕಾನ್ವೆಂಟಿಗೆ ಪ್ರಥಮ ಸ್ಥಾನ

Advertisement

ತುರುವೇಕೆರೆ : ತಾಲ್ಲೂಕಿನ ಮಾಯಸಂದ್ರದ ಎನ್. ಕೆಂಪಯ್ಯ ಬಯಲು ರಂಗಮಂದಿರ ಆವರಣದಲ್ಲಿ ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಸುರೇಶ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿದೆ. ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಲು ಸಾಕಷ್ಟು ಮಹನೀಯರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆ ಮಹನೀಯರ ಆದರ್ಶನೀಯ ಗುಣಗಳು, ದೇಶಪ್ರೇಮ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಮಕ್ಕಳೇ ಈ ದೇಶದ ಮುಂದಿನ ಭವಿಷ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ ಸಂಸ್ಕಾರದ ಜೊತೆಗೆ ದೇಶಪ್ರೇಮದ ಕಿಚ್ಚನ್ನು ಮನದಲ್ಲಿ ಹೊತ್ತಿಸಬೇಕೆಂದರು. 

news_1787051425_1_240.webp

 

ಸಮಾರಂಭದಲ್ಲಿ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ಪಥಸಂಚಲನಕ್ಕೆ ಪ್ರಥಮ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ, ಛದ್ಮವೇಶದ ಭಾರತಾಂಬೆಯ ಪಾತ್ರದಾರಿ ಮೌನಶ್ರೀ ಪ್ರಥಮ, ವಂದೇ ಮಾತರಂ, ರಾಷ್ಟ್ರಗೀತೆ, ಝಂಡಾಗೀತೆ, ರೈತಗೀತೆ ಗಾಯನಕ್ಕೆ ಪ್ರಥಮ ಸ್ಥಾನಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳ ಪ್ರಭಾತ್ ಭೇರಿ, ಎಲ್.ಕೆ.ಜಿ., ಯುಕೆಜಿ, 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣದೊಂದಿಗೆ ವಿಶೇಷ ಟ್ಯಾಬ್ಲೋ ಮೂಲಕ ಮೆರವಣಿಗೆ ನಡೆಸಿ ದೇಶಪ್ರೇಮ ಮೆರೆದಿದ್ದು, ನಾಗರೀಕರ ಗಮನಸೆಳೆಯಿತು. 

ಕಾರ್ಯಕ್ರಮದಲ್ಲಿ ಸೌರಭ ಕಾನ್ವೆಂಟಿನ ಕಾರ್ಯದರ್ಶಿ ಕಲ್ಪನಾಮುನಿರಾಜು, ಮುಖ್ಯ ಶಿಕ್ಷಕ ಮುನಿರಾಜು, ಶಿಕ್ಷಕರಾದ ಲಲಿತಾ ಭಟ್, ಸೌಮ್ಯ, ಪ್ರಭಾ, ನುಸ್ರತ್ ಝಬಿನ್, ನಜೀಮಾ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್