ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರಕರ್ ನೇತೃತ್ವದಲ್ಲಿ ಈ ವಾರ ಆಯ್ಕೆ ಮಂಡಳಿ ಸಭೆ ಸೇರಲಿದ್ದು, ಶ್ರೀಲಂಕಾ ವಿರುದ್ಧದ ೨ ಟೆಸ್ಟ್ಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಅಗಷ್ಟ್ ೧೫ ರಿಂದ ಗಾಲೆಯಲ್ಲಿ ಎರಡು ಟೆಸ್ಟ್ಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಂಗ್ಲೆAಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ ಅವರ ಫಿಟ್ನೇಶ್ ವಿವರಕ್ಕಾಗಿ ಆಯ್ಕೆದಾರರು ಕಾಯುತ್ತಿದ್ದಾರೆ.
ವಾಷಿಂಗ್ಟನ್ ಸುಂದರ್ ಅಲಭ್ಯರಾದರೆ ಅವರ ಸ್ಥಾನದಲ್ಲಿ ಬದಲಿ ಆಟಗಾರನ ಆಯ್ಕೆಯಾಗಲಿದೆ.


