LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Advertisement

ಮಾನ್ವಿ: ಪಟ್ಟಣದ  ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪ ಡಾ.ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪ ಸಮರ್ಪಿಸುವ ಮೂಲಕ ಉದ್ಘಾಟಿಸಿ ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ ಮಕ್ಕಳಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿಳಿಸುವ ಉದ್ದೇಶದಿಂದ ರಾಜ್ಯಾಧ್ಯಂತ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸಂವಿಧಾನದ ಪಿಠೀಕೆಯನ್ನು ತಿಳಿದು ಕೊಂಡಲ್ಲಿ ನಮಗೆನಮ್ಮ ಸಂವಿಧಾನವನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ನಮ್ಮ ದೇಶದಲ್ಲಿ ನಾವೇಲ್ಲರು ಸಂವಿಧಾನದ ಅಡಿಯಲ್ಲಿ ಜೀವಿಸುತ್ತಿದ್ದೇವೆ . ಡಾ.ಅಂಬೇಡ್ಕರ್ ರವರ ಜೀವನ ಹಾಗೂ ಅವರು ತೋರಿದ ಮಾರ್ಗ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿದೆ.ದೇಶದ ಎಲ್ಲಾ ಜಾತಿ ಸಮುದಾಯದವರಿಗೆ ಸಮಾನವಾದ ಅವಕಾಶ ಮತ್ತು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ.ನಮ್ಮ ಹಿರಿಯರ ಹೋರಾಟದ ಫಲವಾಗಿ ನಮ್ಮಗೆ ಸ್ವಾತಂತ್ರö್ಯ ದೊರೆತಿರುವುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿದರು. ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.ಈಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು. ಹಾಗೂ ತಾಲೂಕು ಮಟ್ಟದ ಯುವ ಸಂಸತ್ ಉದ್ಘಾಟನೆ ನೆರವೇರಿಸಲಾಯಿತು.

ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ.ಬಸವರಾಜ ಕರಡಿಗುಡ್ಡರವರು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
 ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಇ.ಓ. ಖಾಲಿದ್ ಅಹಮ್ಮದ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಾಯಿರ ಬಾನು ನದಾಪ್ .ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಡಿ. ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಾಫುರ್ ಸಬ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದಬಿ.ಕೆ.ಅಮರೇಶಪ್ಪ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರಭಾರಿ ಪ್ರಾಚಾರ್ಯರಾದ ನಾಗಮಲೇಶ್,ಉಪಪ್ರಾಚಾರ್ಯರಾದ ಸಂಜೀವ ಸುಧಾಕರ್, ಡಾ. ಸೈಯದ್ ಖಾಲಿದ ಖಾದ್ರಿ,ವಸಂತ್ ಕೊಡ್ಲಿ,ಯಲ್ಲಪ್ಪ ಬಾದರದಿನ್ನಿ, , ಅಗ್ನಿಶಾಮಕ ಠಾಣೆಯ ಹಿರಿಯ ಠಾಣಾಧಿಕಾರಿ ರಂಗಪ್ಪ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ.ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಡಿ.ಕೆ.ಶಿವಕುಮಾರ್ ಮುಸ್ಲಿಂರ ಟೋಪಿ ಹಾಕಿದಕ್ಕೆ ತಲೆ ಬೋಳಿಸಿಕೊಂಡು, ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದೇನೆ : ಶಾಸಕ ಯತ್ನಾಳ್ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ : ಕಾಶಪ್ಪನವರ್ ಸ್ಫೋಟಕ ಹೇಳಿಕೆಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದು ಅಂಶವಿಲ್ಲ : ಡಿ.ಕೆ.ಶಿವಕುಮಾರ್ ಕಿಡಿರಮೇಶ್ ಜಾರಕಿಹೊಳಿ ಮುಗ್ಸಿದ್ರು, ಈಗ ಸತೀಶ್ ಜಾರಕಿಹೊಳಿ ಸರತಿ: ಕುಮಾರಸ್ವಾಮಿ ,ಮೊಹಸಿನ್ ನಕ್ವಿ ಯಾವುದೇ ಆಕ್ಷೇಪ ವ್ಯಕ್ತ ಪಡಿಸಿಲ್ಲ,ಕರ್ತವ್ಯಲೋಪ, ಸರ್ಕಾರಿ ಜಮೀನು ಅಕ್ರಮ ಖಾತೆ ಆರೋಪ: ಮಾಯಸಂದ್ರ ಕಂದಾಯ ನಿರೀಕ್ಷಕರ ವಜಾಕ್ಕೆ ರೈತ ಸಂಘ ಒತ್ತಾಯಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಸಚಿನ್ ದಾಖಲೆ ಅಳಿಸಿ ಹಾಕಿದ ಟೇಲರ್ RuPay ಬಳಕೆದಾರರಿಗೆ ಸಿಹಿ ಸುದ್ದಿ: ₹2,000 ವರೆಗಿನ ಡಿಜಿಟಲ್ ಪಾವತಿಗೆ ಯಾವುದೇ ಶುಲ್ಕವಿಲ್ಲ