ಐಗಳಿ: ಕ್ರಾಸ್ ಮಾಣಿಕಪ್ರಭು ವಿರಕ್ತಮಠ ಮಠದ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭವಾಗಲಿದೆ. ಜಾನುವಾರಗಳ ಬೃಹತ್ ಮಾರಾಟ ಹಾಗೂ ವಿವಿಧ ಧಾರ್ಮಿಕ ಮತ್ತು ಮನರಂಜನೆ ಕಾರ್ಯಕ್ರಮ ಗಳು ಜರಗಲಿವೆ ನಾಳೆ ಮಂಗಳವಾರ 11 ರಿಂದ 15 ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.
https://youtube.com/shorts/shyy3ZnrgxE
ಮಂಗಳವಾರ ರಂದು ಶ್ರೀಗಳ ಗದ್ದುಗೆ ವಿಶೇಷ ಪೂಜೆ ಹಾಗೂ ಮಹಾಪೂಜೆ ನಡೆಯಲಿದೆ. ಜಾತ್ರೆಯಲ್ಲಿ ಈ ಬಾರಿ ರೈತರಿಗಾಗಿ ಬೃಹತ್ ಕೃಷಿಮೇಳವನ್ನು ಆಯೋಜಿಸಲಾಗಿದೆ ಈ ಬೃಹತ್ ಕೃಷಿ ಮೇಳದ ಉಪಯೋಗವನ್ನು ಅಥಣಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡೆಯಬೇಕಾಗಿದೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷರಾದ ಪ್ರಲ್ಹಾದ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.instagram.com/reel/DHBdJU0pbWF/?utm_source=ig_web_copy_link&igsh=MzRlODBiNWFlZA==
13 ರಿಂದ 15 ರವರೆಗೆ ಪ್ರತಿದಿನ ಸಂಜೆ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರಗಲಿದೆ ಈ ಕಾರ್ಯಕ್ರಮದಲ್ಲಿ ಗಣ್ಯರು ರಾಜಕೀಯ ನಾಯಕರು ರೈತ ಪರ ಚಿಂತಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಲಿದ್ದಾರೆ ಈ ಜಾತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಲೈಟಿಂಗ್ ವ್ಯವಸ್ಥೆ ಮತ್ತು ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ನಡೆಯಲಿದೆ.
ಈ ಜಾತ್ರೆಯಲ್ಲಿ ಪ್ರತಿಯೊಬ್ಬ ರೈತರು ಆಗಮಿಸಿ ಕೃಷಿ ಮೇಳದಲ್ಲಿ ಭಾಗಿಯಾಗಿ ತಮ್ಮ ಇಷ್ಟವಾದ ಸಲಕರಣೆಗಳು ಹಾಗೂ ರೈತರಿಗೆ ಬೇಕಾಗಿರುವ ವಿವಿಧ ರೀತಿಯ ಎಲೆಕ್ಟ್ರಿಕಲ್ ವಸ್ತುಗಳು ನಾನಾ ರೀತಿಯ ವಸ್ತುಗಳು ಈ ಒಂದು ಕೃಷಿ ಮೇಳದಲ್ಲಿ ಸಿಗಲಿವೇ ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರ ದಿಂದ ಮಾರಾಟಗಾರರು ಆಗಮಿಸಲಿದ್ದಾರೆ ಆದ ಕಾರಣ ರೈತರು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಕೃಷಿ ಮೇಳವನ್ನು ಯಶಸ್ವಿಯಾಗಿ ನಡಿಸಿ ಕೊಡಬೇಕೆಂದು ಜಾತ್ರೆ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

