Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವ ಜಯಂತಿ: ಭಕ್ತರಿಂದ ಮಹಾಪ್ರಸಾದ ಸ್ವೀಕಾರ

Advertisement
ನಿಪ್ಪಾಣಿ :  ಕಳೆದ ಎರಡು ದಶಕಗಳಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕಿತ್ತೂರು ಕದಳಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಬುಧವಾರದಂದು ಬಸವೇಶ್ವರ ಜಯಂತಿ ಪ್ರಯುಕ್ತ ನಿಡಸೋಸಿ ಮಠದ ದಾಸೋಹದ ಮಾದರಿಯಲ್ಲಿ ಸಿದ್ದೇಶ್ವರ ಮಂದಿರದಲ್ಲಿ 10,000ಕ್ಕೂ ಅಧಿಕ ಭಕ್ತರಿಗೆ ಹುಗ್ಗಿ ದಾಸೋಹ ನಡೆಯಿತು.

ಬೆಳಿಗ್ಗೆ 11 ಗಂಟೆಗೆ ಮೊದಲು ಪ್ರಸಾದ ನೈವೇದ್ಯವನ್ನು ಸಿದ್ದೇಶ್ವರ ದೇವರಿಗೆ ಅರ್ಪಿಸಿ ಬಸವೇಶ್ವರ ಯುವಕ ಮಂಡಳಿ ಹಾಗೂ ಕದಳಿ ವೇದಿಕೆ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಶಿವಾನಂದ ಸ್ವಾಮಿ ಅವರ ಹಸ್ತದಿಂದ ಹುಗ್ಗಿದಾಸೋಹ ಪ್ರಾರಂಭವಾಯಿತು.ಈ ಸಂದರ್ಭದಲ್ಲಿ ಅತ್ಯಂತ ಶಿಸ್ತು ಹಾಗೂ ಸoಯಮದಿಂದ ಮಂದಿರದಲ್ಲಿ ಸರಣಿಯಲ್ಲಿ ಕುಳಿತು ಸದ್ಭಕ್ತರು ಪ್ರಸಾದ ಸ್ವೀಕರಿಸಿದರು. ಗ್ರಾಮದ ಸುತ್ತಲಿನ ಹಳ್ಳಿಗಳಾದ ಶಮನೇವಾಡಿ ಭೋಜ, ಜನವಾಡ ಸಿರದವಾಡ ಗಳತಗಾ ಸೇರಿದಂತೆ ದಿನವಿಡೀ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಪಾಯಸ ಪ್ರಸಾದ ಸ್ವೀಕರಿಸಿದರು.

ದಾಸೋಹ ಸಮಾರಂಭದಲ್ಲಿ ಬಸವೇಶ್ವರ ಯುವಕ ಮಂಡಳ ಹಾಗೂ ಕಿತ್ತೂರು ಕದಳಿ ವೇದಿಕೆಯ ಭಗಿಣಿಯರಿಂದ ಹಾಗೂ ಕಾರ್ಯಕರ್ತರಿಂದ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ