
ಸ್ವಾಮೀಜಿ ಅವರ ಬಗ್ಗೆ ನಮ್ಮ ಸಮಾಜಕ್ಕೆ ಅಪಾರವಾದ ಗೌರವವಿದ್ದು ಈ ಸ್ವಾಮೀಜಿಯವರ ಹೇಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತವೆ, ಹೆಚ್,ಎನ್ ನಾಗಮೋಹನ್ ದಾಸ್ ವರದಿಯನ್ನು ಸುಡುವ ಮೂಲಕ ಸಂವಿಧಾನಕ್ಕೆ ಮತ್ತು ಕಾನೂನಿಗೆ ಅಗೌರವ ತೋರುತಿರುವುದನ್ನು ನಾವು ಖಂಡಿಸುತ್ತೇವೆ. ಹಾಗಾಗಿ ಸ್ವಾಮೀಜಿ ಅವರು ನಮ್ಮ ಸಮಾಜ ಬಗ್ಗೆ ಅವಯೋಣ ಕಾರ್ಯವನ್ನು ಮಾಡುವುದು ಮತ್ತು ವರದಿಯನ್ನು ಸುಡುವುದರ ಮೂಲಕ ಸಂವಿಧಾನಕ್ಕೆ ಮತ್ತು ಸಮಾಜಕ್ಕೆ ಅಪಚಾರ ಮಾಡಿರುವುದನ್ನು ಕೂಡಲೇ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಸ್ವಾಮೀಜಿಯವರು ಎಲ್ಲೆ ಓಡಾಡಿದರು ಕೂಡ ನಮ್ಮ ಸಮಾಜ ಉಗ್ರವಾಗಿ ಖಂಡಿಸುವ ಮೂಲಕ ಅವರನ್ನು ಗೊರವಾಗುವಂತ ಕೆಲಸ ಮುಂದಿನ ದಿನಗಳಲ್ಲಿ ಈ ಸಮಾಜ ತೀರ್ಮಾನಿಸಬೇಕಾಗುತ್ತದೆ ಎಂದು ಮಾದಿಗ ಸಮಾಜ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ಎಚ್ಚರಿಕೆ ನೀಡಿದರು.
ತದನಂತರ ತಾಲೂಕ ದಂಡಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಗೋಪಾಲ್ ಕಟ್ಟಿಮನಿ , ಸುನಿಲ್ ಸಲಗರ್, ಅಪ್ಪಯ್ಯ ಹಂದರಕಿ, ರಾಜು ಮುಕ್ಕಣ್ಣ, ಮಲ್ಲು ಕೊಡಂಬಲ್, ಅರ್ಜುನ್ ಕ್ರಾಂತಿ, ವಿಜಯಕುಮಾರ್ ಆಡಕಿ. ಜಗನಾಥ್ ಚಿಂತಪಲ್ಲಿ, ದೀಪಕ್ ಎಂ.ಜಿ, ಅಶೋಕ್ ಪೆರಂಗಿ, ಭೀಮು ಮುಧೋಳ, ಶಿವಪುತ್ರ ಮೊಘಾ, ದೇವೇಂದ್ರ ಕಣೆಕಲ್, ಬಸವರಾಜ್ ಕಾಳಗಿ, ರಾಮು ಕಣೆಕಲ್, ಹನುಮಂತ್ ಭರತನೊರ, ಮಾದಿಗ ಸಮಾಜದ ತಾಲೂಕು ಅಧ್ಯಕ್ಷರು ಮಾರುತಿ ಕೊಡಂಗಳ್ಕರ್, ತಾಲೂಕ ಪ್ರಚಾರ ಸಮಿತಿ ಅಧ್ಯಕ್ಷರು ಮಾರುತಿ ಎಂ ಹೆಡ್ಡಳ್ಳಿಕರ್, ನಗರ ಗೌವರ ಅಧ್ಯಕ್ಷರು ದತ್ತು ಮುಗುಟಿ, ನಗರ ಅಧ್ಯಕ್ಷರು ಸಂತೋಷ್ ಇಂಜಳ್ಳೀಕರ ಸೇರಿದಂತೆ ತಾಲೂಕ ಮಾದಿಗ ಮುಖಂಡರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್

