Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಲಸಕ್ಕೆ ಅಡ್ಡಿಯಾಯಿತಲ್ಲ ಈ ಹೈಟು!!

Advertisement
ಹೈದರಾಬಾದ್​: ಪ್ರಪಂಚದಲ್ಲಿ ಅತ್ಯಂತ ಎತ್ತರದ ವ್ಯಕ್ತಿ, ಅತ್ಯಂತ ಕುಬ್ಜ ವ್ಯಕ್ತಿಗಳೆಂದು ಗಿನ್ನೆಸ್​ ದಾಖಲೆಗಳನ್ನು ಮಾಡಿದವರಿದ್ದಾರೆ. ಆದರೆ ಈ ವ್ಯಕ್ತಿಗೆ ಆತನ ಎತ್ತರವೇ ಮುಳುವಾಗಿ ಪರಿಣಮಿಸಿದೆ. 7 ಅಡಿ ಎತ್ತರವಿರುವ ಇವರು ವೃತ್ತಿಯಲ್ಲಿ ಬಸ್​ ಕಂಡಕ್ಟರ್​. ಬಸ್ಸಿನ ಒಳಗೆ 6 ಅಡಿ ಎತ್ತರವಿದೆ. ಹಾಗಾಗಿ ಇವರು ಕರ್ತವ್ಯದಲ್ಲಿರುವಾಗಲೆಲ್ಲ ಕುತ್ತಿಗೆಯನ್ನು ಅರ್ಧ ಬಗ್ಗಿಸಿಕೊಂಡೇ ಕೆಲಸ ಮಾಡುತ್ತಾರೆ.

ಮೇಲಿನ ಫೋಟೋದಲ್ಲಿ ನೀವು ನೋಡುತ್ತಿರುವ ವ್ಯಕ್ತಿಯ ಹೆಸರು ಅಮೀನ್ ಅಹ್ಮದ್ ಅನ್ಸಾರಿ. ಇವರು ಚಂದ್ರಾಯನಗುಟ್ಟದ ಶಾಹಿನಗರದ ನಿವಾಸಿ. ಇವರ ತಂದೆ ಹೈದರಾಬಾದ್​ನ ಕಾಚಿಗುಡ ಡಿಪೋದಲ್ಲಿ ಹೆಡ್​ ಕಾನ್​ಸ್ಟೆಬಲ್​ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಅನಾರೋಗ್ಯದ ಕಾರಣದಿಂದ ಅವರು ನಿಧನರಾದರು. ಅನುಕಂಪದ ನೇಮಕಾತಿಯಡಿಯಲ್ಲಿ ಇಂಟರ್ (ಪಿಯುಸಿ)​ ಪೂರ್ಣಗೊಳಿಸಿದ ಅನ್ಸಾರಿ ಅವರಿಗೆ ಮೆಹದಿಪಟ್ನಂ ಆರ್​ಟಿಸಿ ಡಿಪೋದಲ್ಲಿ ಕಂಡಕ್ಟರ್​ ಕೆಲಸ ಸಿಕ್ಕಿತು. ಅನ್ಸಾರಿ ಅವರಿಗೆ ಕೆಲಸ ಸಿಕ್ಕಿದ ಖುಷಿ ಒಂದೆಡೆಯಾದರೆ, 7 ಅಡಿ ಎತ್ತರದಿಂದಾಗಿ ಕರ್ತವ್ಯ ನಿರ್ವಹಿಸುವುದು ಒಂದು ಸವಾಲೇ ಆಗಿಹೋಯಿತು.

"ದಯವಿಟ್ಟು ನನಗೆ ಬೇರೆ ಕೆಲಸ ಕೊಡಿ": ನಾನು ದಿನಕ್ಕೆ ಸರಾಸರಿ 5 ಟ್ರಿಪ್‌ಗಳಂತೆ 10 ಗಂಟೆಗಳ ಕಾಲ ಬಸ್‌ಗಳಲ್ಲಿ ಪ್ರಯಾಣಿಸಬೇಕು. ಈ ಬಸ್ಸು 214 ಸೆಂ.ಮೀ ಅಗಲ ಮತ್ತು 195 ಸೆಂ.ಮೀ (6 ಅಡಿ 4 ಇಂಚು) ಎತ್ತರವಿದೆ. ನಾನು ಅದಕ್ಕಿಂತ ಎತ್ತರವಾಗಿರುವುದರಿಂದ ಮತ್ತು ಗಂಟೆಗಟ್ಟಲೆ ತಲೆ ಬಾಗಿಸಿ ಪ್ರಯಾಣಿಸುವುದರಿಂದ ಕುತ್ತಿಗೆ ಮತ್ತು ಬೆನ್ನು ನೋವು, ನಿದ್ರಾಹೀನತೆಯಿಂದ ಆಸ್ಪತ್ರೆಗಳಿಗೆ ಓಡಾಡಬೇಕಾಗಿದೆ ಎಂದು ಅನ್ಸಾರಿ ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಉನ್ನತ ಅಧಿಕಾರಿಗಳು ಸ್ಪಂದಿಸಿ ಅವರಿಗೆ ಆರ್‌ಟಿಸಿಯಲ್ಲಿ ಬೇರೆ ಕೆಲಸ ನೀಡುವಂತೆ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ