LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕನ್ನಡದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಗಂಡುಗಲಿ ಕುಮಾರರಾಮ : ಅಂಬಣ್ಣ ನಾಯಕ ಗುಜ್ಜಲ್ 

Advertisement

ಮಾನ್ವಿ : ಸ್ವಾತಂತ್ರ್ಯ ಭಾರತದಲ್ಲಿ ಮೊಟ್ಟ ಮೊದಲ ಹೋರಾಟಗಾರ ಪರನಾರಿ ಸಹೋದರ ಗಂಡುಗಲಿ ಕುಮಾರರಾಮ ಎಂದು ಕರ್ನಾಟಕ ರಾಜ್ಯ ಬೇಡರ ಪಡೆಯ ರಾಜ್ಯಾಧ್ಯಕ್ಷರಾದ ಅಂಬಣ್ಣ ನಾಯಕ ಗುಜ್ಜಲ್ ಅವರು ಹೇಳಿದರು. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಹಾಗೂ ಗಂಡುಗಲಿ ಕುಮಾರರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 
ಗಂಡುಗಲಿ ಕುಮಾರರಾಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಕುಮ್ಮಟ ದುರ್ಗದ ಸಾಮ್ರಾಜ್ಯದ ಅರಸನಾದ ಗಂಡುಗಲಿ ಕುಮಾರ ರಾಮ ದೆಹಲಿಯ ಸುಲ್ತಾನರ ವಿರುದ್ಧ ಹೋರಾಡಿ ಅನೇಕ ಭಾರಿ ಸೋಲಿಸಿ ಓಡಿಸಿದ್ದಾನೆ. ಕುಮ್ಮಟ ದುರ್ಗದ ಸಾಮ್ರಾಜ್ಯವನ್ನು ಪೂವಲ ಬೆಡಗಿನ ಮುಮ್ಮಡಿ ಸಿಂಗೇನಾಯಕ ಸ್ಥಾಪನೆ ಮಾಡುತ್ತಾನೆ. ತದನಂತರ ಅವನ ಮಗನಾದ ವಿರಕಂಪಿಲರಾಯ ಆ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ. ವಿರಕಂಪಿಲರಾಯನ ಮಗನೆ  ಗಂಡುಗಲಿ ಕುಮಾರರಾಮ. ಗಂಡುಗಲಿ ಕುಮಾರರಾಮ ಅಕ್ಕನನ್ನು ಭಾವ ಸಂಗಮನಿಗೆ ಕೊಡುತ್ತಾರೆ. ಬಹುದೊಡ್ಡ ವಿಜಯನಗರ ಸಾಮ್ರಾಜ್ಯಕ್ಕೆ ಭಾವಸಂಗಮನ ಮಕ್ಕಳಾದ ಹಕ್ಕ-ಬುಕ್ಕರಿಂದಲೇ ವಿಜಯನಗರ ಸ್ಥಾಪನೆಯಾಗಿದೆ ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಯಾಗಿ ಆಗಮಿಸಿದ ಶಾಸಕರ ಸುಪುತ್ರರಾದ ಶಿವರಾಜ ನಾಯಕ ಸಾಹುಕಾರ ಮಾತನಾಡಿ ಪರನಾರಿ ಸಹೋದರ ಹಿಂದು ಸಾಮ್ರಾಜ್ಯವನ್ನು ದಕ್ಷಿಣ ಭಾರತದಲ್ಲಿ ವಿಸ್ತರಿಸಿದವರೆ ಗಂಡುಗಲಿ ಕುಮಾರರಾಮರು. ಇವರು ಧೈರ್ಯ ಶೌರ್ಯದಿಂದ ಹೋರಾಡಿ ಎದುರಾಳಿ ಸೈನಿಕರ ಸದೆಬಡಿಯುವ ಮೂಲಕ ದೆಹಲಿ ಸುಲ್ತಾನರನ್ನು ಸೋಲಿಸಿದರು ಎಂದು ಹೇಳಿದರು.
 ಇನ್ನೊರ್ವ ಮುಖ್ಯ ಅತಿಥಿಯಾದ ಎಂ.ಬಿ.ನಾಯಕ ಮಾತನಾಡಿ ನಮ್ಮ ವಾಲ್ಮೀಕಿ ಸಮಾಜದ ಆದರ್ಶ ಪುರುಷರನ್ನು ಸ್ಮರಿಸಬೇಕೆಂದರೆ ಅವರ ಜಯಂತಿಯನ್ನು ಆಚರಣೆ ಮಾಡಿ ಅವರು ಮಾಡಿದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು.ಈ ನಾಡಿಗೆ ರಾಮಾಯಣ ಪರಿಚಯಿಸಿದ ಶ್ರೀ ಮಹರ್ಷಿ ವಾಲ್ಮೀಕಿ ದೈವ ಭಕ್ತಿಗೆ ಕಣ್ಣು ಕೊಟ್ಟ ಬೇಡರ ಕಣ್ಣಪ್ಪ ಗುರುಭಕ್ತಿಗೆ ಹೆಬ್ಬೆರಳು ಕೊಟ್ಟ ಏಕಲವ್ಯ ಇಂತಹ ಮಹಾನ್ ನಾಯಕರು ನಮ್ಮ ಸಮಾಜದಲ್ಲಿ ಹುಟ್ಟಿದ್ದು ನಮ್ಮ ಸೌಭಾಗ್ಯ ಎಂದು ಹೇಳಿದರು.
 ಆಂಜನೇಯ ನಸಲಾಪುರ ಮಾತನಾಡಿ ದೆಹಲಿ ಸುಲ್ತಾನರ ಬೃಹತ್ ಸೈನ್ಯವನ್ನು ಎದೆಗುಂದದೆ ಎದುರಿಸಿ, ಶರಣಾಗತರ ರಕ್ಷಣೆಗಾಗಿ ಪ್ರಾಣವನ್ನೇ ತೃಣಕ್ಕೆ ಸಮಾನವಾಗಿ ತ್ಯಾಗ ಮಾಡಿದ ಕುಮಾರರಾಮನ ಸಾಹಸಗಾಥೆಯನ್ನು ಸ್ಮರಿಸಬೇಕು.ನಮ್ಮ ಸಮಾಜದ ಆದರ್ಶ ನಾಯಕರು ನಾಡಿನ ಸಂರಕ್ಷಣೆಗಾಗಿ ಹೋರಾಡಿದ್ದಾರೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಮಾಜದ ಆದರ್ಶ ಪುರುಷರ ಬಗ್ಗೆ ಜಯಂತಿಯನ್ನು ಮಾಡುವುದರ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ದೇವೇಂದ್ರ ನಾಯಕ ತಾಲೂಕಾಧ್ಯಕ್ಷರು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ, ಕೊಂಡಯ್ಯ ನಾಯಕ ತಾಲೂಕ ಪ್ರಧಾನ ಕಾರ್ಯದರ್ಶಿ, ಹಂಪಯ್ಯ ನಾಯಕ ಬೆಳಗಿನಪೇಟೆ ಪುರಸಭೆ ನಾಮನಿರ್ದೇಶನ ಸದಸ್ಯರು, ಜೆಲ್ಲಿ ಅಂಜಿನೇಯ್ಯ ನಾಯಕ ನೀರಮಾನ್ವಿ , ಅಮರೇಶ ನಾಯಕ, ವಿನೋದ ನಾಯಕ,ಆಂಜನೇಯ (ಉಪೇಂದ್ರ) ನಾಯಕ, ನರಸಿಂಹ ನಾಯಕ ಗುಡಸಲಿ, ಮಹೇಶ ನಾಯಕ ಬೆಟ್ಟದೂರ,ದೇವು ನಾಯಕ,ವೀರನಗೌಡ ಕೊರವಿ,ರಂಗನಾಥ ನಾಯಕ ಉಮಳಿ ಹೊಸೂರು,ದೇವರಾಜ ನಾಯಕ, ಹನುಮಪ್ಪ ನಾಯಕ ಸಂಗಾಪುರ ಇನ್ನು ಕೆಲವರು ಇದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್