Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದ ಬಡತನ ಸೂಚ್ಯಂಕ ಪ್ರಕಟ : ಯಾದಗಿರಿ ಬಡತನದಲ್ಲಿಯೇ ನಂ1

Advertisement
ಬೆಂಗಳೂರು: ಕರ್ನಾಟಕದ ಜಿಲ್ಲೆಗಳ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಹೊಸದೊಂದು ಚಿತ್ರಣ ಲಭ್ಯವಾಗಿದೆ.

ರಾಜ್ಯ ಯೋಜನಾ ಇಲಾಖೆಯ (SDGCC GoK) 2019-20ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಜಿಲ್ಲೆಗಳ ನಡುವೆ ಬಡತನದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ.

ಸಮೀಕ್ಷೆಯ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿದ್ದರೆ, ಕರಾವಳಿ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸ್ಥಿತಿಯಲ್ಲಿವೆ.

ಅತಿ ಹೆಚ್ಚು ಬಡತನವಿರುವ ಟಾಪ್ 5 ಜಿಲ್ಲೆಗಳು:

ಅಂಕಿ-ಅಂಶಗಳ ಪ್ರಕಾರ, ಅತಿ ಹೆಚ್ಚು ಬಡತನದ ಸೂಚ್ಯಂಕ ಹೊಂದಿರುವ ಜಿಲ್ಲೆಗಳು ಇಲ್ಲಿವೆ:

ಯಾದಗಿರಿ: 28.68% (ರಾಜ್ಯದಲ್ಲೇ ಅತಿ ಹೆಚ್ಚು ಬಡತನ)

ರಾಯಚೂರು: 21.58%

ಗುಲ್ಬರ್ಗ (ಕಲಬುರಗಿ): 20.33%

ಕೊಪ್ಪಳ: 19.35%

ವಿಜಯಪುರ: 17.52%

ಅತಿ ಕಡಿಮೆ ಬಡತನವಿರುವ ಜಿಲ್ಲೆಗಳು:

ರಾಜ್ಯದ ರಾಜಧಾನಿ ಮತ್ತು ಕರಾವಳಿ ಭಾಗದಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ:

ಬೆಂಗಳೂರು (ಗ್ರಾಮಾಂತರ): 0.79% (ಅತಿ ಕಡಿಮೆ)

ರಾಮನಗರ: 0.96

ದಕ್ಷಿಣ ಕನ್ನಡ: 1.29%

ಬೆಂಗಳೂರು (ನಗರ): 1.28%

ಕೋಲಾರ: 2.01%

ಪ್ರಮುಖ ಅಂಶಗಳು:

ಯಾದಗಿರಿ ಜಿಲ್ಲೆ ಬಡತನದ ತೀವ್ರತೆಯಲ್ಲಿ (45.07%) ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 8.79 ಲಕ್ಷ ಜನರು ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದ ಒಟ್ಟು ಜನಸಂಖ್ಯೆ 1.4 ಕೋಟಿಗಿಂತ ಹೆಚ್ಚಿದ್ದರೂ, ಬಡತನದ ಸೂಚ್ಯಂಕ ಕೇವಲ 0.0053 ರಷ್ಟಿದೆ.

ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಡತನದ ಪ್ರಮಾಣ ಶೇ. 3ಕ್ಕಿಂತ ಕಡಿಮೆ ದಾಖಲಾಗಿದೆ, ಇದು ಈ ಭಾಗದ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತದೆ.

ಗಮನಿಸಿ: ಈ ಅಂಕಿ-ಅಂಶಗಳು ಬಹು ಆಯಾಮದ ಬಡತನ ಸೂಚ್ಯಂಕ (MPI) ಮೇಲೆ ಆಧಾರಿತವಾಗಿದ್ದು, ಕೇವಲ ಆದಾಯ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಪರಿಗಣಿಸಿ ಸಿದ್ಧಪಡಿಸಲಾಗಿದೆ.

 

 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ