Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಕಳುವಾದ ಬೈಕ್‌ಗಳ ಪತ್ತೆ – ಇಬ್ಬರು ಆರೋಪಿಗಳ ಬಂಧನ

Advertisement

ಬೆಳಗಾವಿ: ಜಿಲ್ಲೆ ಚಿಕ್ಕೋಡಿ ತಾಲೂಕಿನ, ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ , ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹1.30 ಲಕ್ಷ ಮೌಲ್ಯದ 5 ಕಳುವಾದ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಸ್ವಪ್ನಿಲ್  ಅನೀಲ ಶಾರಬಿದ್ರೆ ಹಾಗೂ ರೋಹಿತ ಬಾಬಾಸಾಬ ದಾನವಾಡೆ ಎಂದು ಗುರುತಿಸಲಾಗಿದೆ. 
ಇಬ್ಬರೂ ಖಡಕಲಾಟ ಗ್ರಾಮದ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಖಡಕಲಾಟ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ಅವರ ವಶದಲ್ಲಿದ್ದ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕೆ. ರಾಮರಾಜನ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ, ಶ್ರೀ ಆರ್. ಬಿ. ಬಸರಗಿ, ಚಿಕ್ಕೋಡಿ ಡಿಎಸ್ಪಿ , ಶ್ರೀ ಗೋಪಾಲಕೃಷ್ಣ ಗೌಡ, ನಿಪ್ಪಾಣಿ ವೃತ್ತದ ಸಿಪಿಐ ಶ್ರೀ ಬಿ. ಎಸ್. ತಳವಾರ ಅವರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಶ್ರೀಮತಿ ಕೃಷ್ಣವೇಣಿ ಸಿ. ಗುರ್ಲಹೊಸೂರ ಹಾಗೂ ಖಡಕಲಾಟ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಯಾದ ಮಂಜುನಾಥ ದಿಂಡಿಗಟ್ಟಿ, ರವಿ ಕುಂಬಾರ, ಎಸ್. ಸಿ. ಅಂಬರಶೆಟ್ಟಿ, ಕೆ. ಎಂ. ಬಳೋಲಟ್ಟಿ, ಆರ್. ಎನ್. ಮುರನಾಳೆ, ಯು. ಎಸ್. ಭಾಗಿ, ತನಿಖಾ ಸಹಾಯಕರಾದ ಎಸ್. ಎಲ್. ಬಾಡಕರ , ಆರ್. ಎಚ್. ಗಸ್ತಿ, , ಎ. ಎನ್. ಚೌಗಲಾ, ಡಿ. ಎಂ. ಹಿರೇಮಠ ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಮತ್ತು ಸಚೀನ್ ಪಾಟೀಲ ಅವರು ಪ್ರಮುಖ ಪಾತ್ರವಹಿಸಿದ್ದರು.

ಪ್ರಕರಣವನ್ನು ಶೀಘ್ರದಲ್ಲೇ ಬಂಧಿಸಿ ಕಳುವಾದ ವಾಹನಗಳನ್ನು ಪತ್ತೆಹಚ್ಚಿದ ಖಡಕಲಾಟ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಕೆ. ರಾಮರಾಜನ್ (ಐಪಿಎಸ್) ಪ್ರಶಂಸಿಸಿದ್ದು, ಸಾರ್ವಜನಿಕರೂ ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಾಯಿತಿ  ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಕಳುವಾದ ಬೈಕ್‌ಗಳ ಪತ್ತೆ – ಇಬ್ಬರು ಆರೋಪಿಗಳ ಬಂಧನಮಾಯಸಂದ್ರ ಕಸಾಪದಿಂದ ಎಸ್.ಜಾನಕಿಗೆ ಗಾನಾಂಜಲಿ ಅರ್ಪಣೆಗುರು ಪೂರ್ಣಿಮೆಯಿಂದ 4ನೇ ದಿನವೂ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನಕ್ಕೆ ಭಕ್ತರ ದಂಡುಮಹಾದೇವಪ್ಪ ತಾತನ ಭಕ್ತಿ ಸುಧೆ ಹಾಡುಗಳಲೋಕಾರ್ಪಣೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿಸಿದ ಎ.ಎಸ್.ಐ ಶಿವಲಿಂಗಪ್ಪಗೆ ಅಭ್ಯರ್ಥಿಗಳ ಕೃತಜ್ಞತೆಒಎಂಆರ್–ಪ್ರಶ್ನೆ ಪತ್ರಿಕೆ ವಿವಾದ; ಅಭ್ಯರ್ಥಿಗಳ ಆಕ್ರೋಶಕ್ಕೆ ಡಿಸಿ ಸ್ಪಷ್ಟನೆಸಚಿವ ಸಂಪುಟ ಪಟ್ಟಿಗೆ ಡಿ. ಕೆ ಶಿವಕುಮಾರ್ ವೇಟಿಂಗ್ : ಅತ್ತ ಖರ್ಗೆ, ರಾಗಾ ಮಿಟಿಂಗ್ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಮಾಡಿದ ಕೈ ಹೈಕಮಾಂಡ್