Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆಯ ಕೊರತೆ ಹಿನ್ನೆಲೆ : ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕ ಬಂದ್ 

Advertisement

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಮಳೆಯ ತೀವ್ರ ಕೊರತೆ ಎದುರಾಗಿದ್ದು, ಇದರ ಬಿಸಿ ಕೇವಲ ರೈತರ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ರಾಜ್ಯದ ವಿದ್ಯುತ್ ಉತ್ಪಾದನಾ ವಲಯಕ್ಕೂ ತಟ್ಟಿದೆ. ಮಳೆಯಿಲ್ಲದೆ ಕಾವೇರಿ ನದಿ ಬರಿದಾಗುತ್ತಿರುವ ಪರಿಣಾಮ, ಐತಿಹಾಸಿಕ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಸ್ಥಾವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್ ಕೇಂದ್ರವೇ ಈಗ ನೀರಿಲ್ಲದೆ ಸ್ತಬ್ಧಗೊಂಡಿರುವ ಘಟಕ. ಪ್ರಕೃತಿ ಮುನಿಸಿನಿಂದಾಗಿ ಕಾವೇರಿ ನದಿಯಲ್ಲಿ ಹರಿವು ಸಂಪೂರ್ಣ ಕ್ಷೀಣಿಸಿದ್ದು, ವಿದ್ಯುತ್ ಟರ್ಬೈನ್‌ಗಳನ್ನು ತಿರುಗಿಸಲು ಅಗತ್ಯವಿರುವಷ್ಟು ನೀರು ಸಿಗದೆ ಉತ್ಪಾದನೆಯನ್ನು ಬಂದ್ ಮಾಡಲಾಗಿದೆ.

ನದಿಯಲ್ಲಿ ಸಮರ್ಪಕ ಪ್ರಮಾಣದ ನೀರಿಲ್ಲದ ಕಾರಣ ಕಳೆದ ಸುಮಾರು ಒಂದೂವರೆ ತಿಂಗಳಿಂದ ಇಲ್ಲಿ ಜಲವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಹಲವು ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ಪ್ರಸಿದ್ಧ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿರುವುದು ಯೋಜನೆಯ ಇತಿಹಾಸದಲ್ಲೇ ಕಳವಳಕಾರಿ ವಿದ್ಯಮಾನವಾಗಿ ಹೊರಹೊಮ್ಮಿದೆ.

ಸಾಮಾನ್ಯ ದಿನಗಳಲ್ಲಿ ಈ ಕೇಂದ್ರದಿಂದ ದಿನಂಪ್ರತಿ ಸುಮಾರು 42 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಈ ಪ್ರಮಾಣದ ವಿದ್ಯುತ್ ಉತ್ಪಾದಿಸಲು ಪ್ರತಿದಿನ ಕನಿಷ್ಠ 1,450 ಕ್ಯೂಸೆಕ್ ನೀರು ಹರಿಯಬೇಕಾದ ಅಗತ್ಯವಿರುತ್ತದೆ.

ಆದರೆ, ಪ್ರಸ್ತುತ ನದಿಯಲ್ಲಿ ಇಷ್ಟೂ ಪ್ರಮಾಣದ ನೀರು ಲಭ್ಯವಿಲ್ಲದೇ ಇರುವುದರಿಂದ ಉತ್ಪಾದನಾ ಪ್ರಕ್ರಿಯೆಗೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಸ್ಥಳೀಯ ಮೂಲಗಳ ಪ್ರಕಾರ, ಕೃಷ್ಣರಾಜಸಾಗರ (KRS) ಅಥವಾ ಕಬಿನಿ ಜಲಾಶಯಗಳಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮಾತ್ರವೇ ಈ ಸ್ಥಾವರದಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲು ಸಾಧ್ಯ.

ಆದರೆ ಜಲಾಶಯಗಳಲ್ಲೂ ಸದ್ಯ ನೀರು ಕನಿಷ್ಠ ಮಟ್ಟದಲ್ಲಿದ್ದು, ಮುಂಗಾರು ಚೇತರಿಸಿಕೊಂಡು ನದಿಗೆ ನೀರು ಹರಿಯುವವರೆಗೆ ಜಲವಿದ್ಯುತ್ ಸ್ಥಾವರ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST