Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ,

Advertisement
-------------------------------ಪೌರಕಾರ್ಮಿಕರ ದಿನಾಚರಣೆ ೨೦೨೫
ಚಡಚಣ:ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಕನ್ನಡ ಶಾಲೆಯಲ್ಲಿ ಸೆ.೨೩ ಮಂಗಳವಾರ ಪೌರಕಾರ್ಮಿಕರ ದಿನಾಚಾರಣೆ ನಿಮಿತ್ಯ ಕಾರ್ಯಕ್ರಮವನ್ನು ಸರ್ಕಾರದ ಆದೇಶದಂತೆ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಚಡಚಣ ಪ.ಪಂ. ಮುಖ್ಯಾಧಿಕಾರಿ ಬಿ.ಕೆ.ತಾವಸೆ ಅವರು ಗ್ರಾಮ, ಪಟ್ಟಣ ಹಾಗೂ ನಗರವನ್ನು ಸ್ವಚ್ಛವಾಗಿರಿಸಿ ಸುಂದರವಾಗಿರಿಸುವಲ್ಲಿ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ, ಮತ್ತು ಕರೋನಾದಂತಹ ಮಹಾಮಾರಿ ರೋಗಗಳನ್ನು ತಡೆಗಟ್ಟುವಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದು ಎಂದರು.

ಪಟ್ಟಣದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರು ತಮ್ಮ ದಿನನಿತ್ಯದ ಕಾಯಕದೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ನೀಡುವಂತೆ ಹೇಳಿದರು.

ಸರಕಾರ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಸುಂದರ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು. ಈಗಾಗಲೇ ಪಟ್ಟಣ ಪಂಚಾಯತ ವತಿಯಿಂದ ಖಾಯಂಹೊಂದಿದ ಪೌರ ಕಾರ್ಮಿಕರಿಗೆ ಮನೆಯ ಹಕ್ಕು ಪತ್ರ ಹಂಚಿಕೆ ಮಾಡಲಾಗಿದೆ ಮತ್ತು ಹೊಸದಾಗಿ ಇತ್ತಿಚೆಗೆ ಖಾಯಂ ನೋಕರಿ ಪಡೆದ ಪೌರ ಕಾರ್ಮಿಕರಿಗೂ ಸರಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಮನೆಯ ಹಕ್ಕು ಪತ್ರ ಹಂಚಿಕೆ ಮಾಡಲಾಗುವದು, ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರ ಸದುಪಯೋಗ ಎಲ್ಲ ಪೌರ ಕಾರ್ಮಿಕರು ಹಾಗೂ ಕುಟುಂಬಸ್ಥರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಹಾಗೂ ಉಪಾಧ್ಯಕ್ಷ ಇಲಾಹಿ ನದಾಫ ಅವರು ಪ.ಪಂ.ವತಿಯಿಂದಎಲ್ಲ ಪೌರಕಾರ್ಮಿಕರಿಗೆ ರೂ೭೦೦೦ ವಿಶೇಷ ಗೌರವ ಧನ ನೀಡಿ ಶಾಲೂ ಹೊದಿಸಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯರಾದ ರಾಜು ಕೋಳಿ,ಗೌಸಪಾಕ ಟಪಾಲ,ಶ್ರೀಕಾಂತ ಗಂಟಗಲ್ಲಿ,ಬಾಲಾಜಿ ಗಾಡಿವಡ್ಡರ,ಪ್ರಕಾಶ ಪಾಟೀಲ,ಚೈತನ್ಯಕುಮಾರ ನಿರಾಳೆ,ಚಂದ್ರಕಾಂತ ಕಲಮನಿ,ಇಬ್ರಾಹಿಂ ಸೌದಾಗಾರ,ಶ್ರೀಮತಿ ಸೂನಬಾಯಿ ಗಂಟಗಲ್ಲಿ,ಸುರೇಖಾ ಬನಸೋಡೆ,ಅರುಣಾಕ್ಷಿ ಗಡ್ಡೆದೇವರಮಠ,ಸಾವಿತ್ರಿ ಮಠ,ಸಾವಿತ್ರಿ ಡೊಳ್ಳಿ,ಸಂಗಪ್ಪ ಭಂಡರಕವಠೆ,ಶಿವಾಜಿ ಬಾಮಣಿ,ವಾಸಿಮ್ ಮುಲ್ಲಾ, ಸಿಬ್ಬಂಧಿಗಳಾದ ವಿನುತಾ ಸಂಕದ,ಅನಸುಯಾ ಕಂಟಿಕರ,ರಾಜೇಂದ್ರ ಸುಗಂದಿ,ಶಿವಾನಂದ ಜಂಗಲಗಿ ಸೇರಿದಂತೆ ಎಲ್ಲ ಪುರುಷ ಹಾಗೂ ಮಹಿಳಾ ಪೌರ ಕಾರ್ಮಿಕರು,ನೀರು ಸರಬರಾಜು ಸಿಬ್ಬಂದಿಗಳು ಇದ್ದರು. ರೋಗ ಬಂದಮೇಲೆ ಗೋಳಾಡುವದಕ್ಕಿಂತ ರೋಗ ಬರದಂತೆ ನೋಡಿಕೊಳ್ಳುವದು ಮುಖ್ಯ * ಬಿ.ಕೆ.ತಾವಸೆ.* ಸರ್ಕಾರದ ವತಿಯಿಂದ ಪೌರಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ತಪ್ಪದೆ ಬಳಸಲು ಸುರಕ್ಷಾ ಪರಿಕರಗಳನ್ನು ನೀಡಿದ್ದು, ತಮ್ಮ ದೈನಂದಿನ ಕಾರ್ಯಗಳಲ್ಲಿ ಸುರಕ್ಷಾ ಪರಿಕರಗಳನ್ನು ಉಪಯೋಗಿಸಿ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸುವದರ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವರದಿ: ಉಮಾಶಂಕರ ಕ್ಷತ್ರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ