Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲರೂ ಕನ್ನಡ ಕಲಿಯೋಣ ಪುಸ್ತಕ ಬಿಡುಗಡೆ

Advertisement
ತುಮಕೂರು:  ಜಿಲ್ಲೆಯ ಪಾವಗಡ ತಾಲ್ಲೂಕಿನ ಮೇ 28, ಪಾವಗಡ ಪಟ್ಟಣದಲ್ಲಿರುವ ಗುರುಭವನದಲ್ಲಿ ನರೇಂದ್ರ ಹೆಚ್‍. ರವರು ಬರೆದಿರುವ ಧನ್ಯ ಪ್ರಕಾಶನ‌ ಅವರ ಸರಳೀಕೃತ ಎಲ್ಲರೂ ಕನ್ನಡ ಕಲಿಯೋಣ ಮತ್ತು Simplified Let's All Learn English ಎಂಬ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

[video width="848" height="478" mp4="https://bharathvaibhav.com/wp-content/uploads/2025/05/WhatsApp-Video-2025-05-29-at-7.26.53-AM.mp4"][/video]

ಲೇಖಕರಾದ ನರೇಂದ್ರ ಹೆಚ್. ಅವರು ಮಾತನಾಡಿ ಈ ಸರಳೀಕೃತ ಎಲ್ಲರೂ ಕನ್ನಡ ಕಲಿಯೋಣ ಪುಸ್ತಕವು ಎಲ್ಲಾ ವಿದ್ಯಾರ್ಥಿಗಳಿಗೆ, ಕನ್ನಡ ಕಲಿಯ ಬಯಸುವ ಹೊಸಬರಿಗೆ ಒಂದು ಸ್ನೇಹಪರ ಮಾರ್ಗದರ್ಶನವಾಗಿದೆ, ಈ ಪುಸ್ತಕವು ಎಂಟು ಹಂತಗಳನ್ನು ಒಳಗೊಂಡಿದ್ದು ಸಾವಿರಕ್ಕಿಂತ ಹೆಚ್ಚು ವಿಶೇಷ ಪದಗಳನ್ನು, ವಾಕ್ಯಗಳನ್ನು, ಪಾಠ ಹಾಗೂ ಪದ್ಯಗಳನ್ನು ಹಲವಾರು ಉದಾಹರಣೆ ಸಹಿತ ವಿವರಣೆಗಳಿಂದ ಕೂಡಿದೆ ಹಾಗೂ ಎರಡನೇ ಪುಸ್ತಕವಾದ Simplified Let's All Learn English ಪುಸ್ತಕವು ಇಂಗ್ಲಿಷ್ - ಕನ್ನಡ ದ್ವಿಬಾಷಾ ಪುಸ್ತಕವಾಗಿದ್ದು ವಿವಿಧ ಪುಸ್ತಕಗಳಲ್ಲಿ ಅನೇಕಾನೇಕ ಬಾರಿ ಪುನರಾವರ್ತನೆ ಆಗುವ ಉಪಯುಕ್ತ ಪದಗಳು, ಸರಳ ವಾಕ್ಯಗಳು, ಅನೇಕ ಸರಳ ಹಾಗೂ ಸ್ಪಷ್ಟವಾದ ವಿವರಣೆಗಳನ್ನು ಒಳಗೊಂಡಿದೆ ಈ ಎರಡು ಪುಸ್ತಕಗಳ ಕ್ರಮಬದ್ಧವಾದ ಅಧ್ಯಯನದಿಂದ ಎಲ್ಲರೂ ಕನ್ನಡ ಮತ್ತು ಇಂಗ್ಲಿಷನ್ನು ಸ್ಪಷ್ಟವಾಗಿ ಓದುವುದನ್ನು ಸರಳವಾಗಿ ಕಲಿಯಬಹುದು ಎಂದು ಲೇಖಕರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹನುಮಂತರಾಯಪ್ಪ ವಹಿಸಿದ್ದರು, ಬಾಪೂಜಿ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ವಿ.ಎನ್.ಜಿ , ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಬಸವಲಿಂಗಪ್ಪನವರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಿವಾನಂದಯ್ಯ , ನಿಕಟ ಪೂರ್ವ ಪ್ರಾಂಶುಪಾಲರಾದ ಮಾರಪ್ಪ ರಾಜ್ಯಶಾಸ್ತ್ರ ಉಪನ್ಯಾಸಕರಾದ ನಾಗೇಂದ್ರಪ್ಪ , ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣಪ್ಪ , ಡಿ ಜೆ ಎಸ್ ನ ನಾರಾಯಣಪ್ಪ ವಾಣಿ ಮುತಾದ ಅತಿಥಿಗಳು ಪುಸ್ತಕಗಳು ಕುರಿತು ಒಳ್ಳೆಯ ಅಭಿಪ್ರಾಯಗಳನ್ನು ವ್ಯಕಪಡಿಸಿದರು.

ಈ ಕಾರ್ಯಕ್ರಮದಲ್ಲಿ ಧನ್ಯಪ್ರಕಾಶನದವರ ಸುನಂದಾ ನರೇಂದ್ರ, ವಿದ್ಯಾರ್ಥಿನಿಯರಾದ ಹರ್ಷಿತ.ವಿ, ಚೈತ್ರ.ಜಿ, ನವ್ಯ, ಭಾವನ, ಸೌಜನ್ಯ, ಇನ್ನೂ 150 ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಶಿವಾನಂದ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ